ಮಹಿಳೆಯರಿಗೆ 2 ಸಾವಿರ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ, ಶಿವಮೊಗ್ಗದಲ್ಲಿ ಅಧಿಕಾರಿಗಳಿಗೆ ಡಿಸಿ 3 ಸೂಚನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 AUGUST 2023

SHIMOGA : ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹ ಲಕ್ಷ್ಮಿ (Gruhalakshmi) ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.27ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ಏಕಕಾಲದಲ್ಲಿ ಎಲ್ಲ ಗ್ರಾಮ ಪ್ರಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕಿದೆ. ಇದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Shivamogga-Live-Number-1-Website

DC-Meeting-about-Gruhalakshmi-Yojane.jpg

ಜಿಲ್ಲಾಧಿಕಾರಿ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ತಹಶೀಲ್ದಾರರರು, ಇಓಗಳು, ಸ್ಥಳೀಯ ಸಂಸ್ಥೆ ಮುಖ್ಯಸ್ಥರು, ಸಿಡಿಪಿಓಗಳೊಂದಿಗೆ ಗೃಹಲಕ್ಷ್ಮಿ (Gruhalakshmi) ಯೋಜನೆ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಪೂರ್ವಭಾವಿ ಸಭೆ ನಡೆಸಿದರು.

ಡಿಸಿ ಸೂಚನೆಗಳೇನು?

POINT 1 jpgಆ.27ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಏಕ ಕಾಲಕ್ಕೆ ಎಲ್ಲ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹಾಗೂ ನಗರ ಸ್ಥಳೀಯ ಸಂಸ್ಥೆ ವಾರ್ಡ್‍ಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಲ್ಲೆಡೆ ಬೆಳಗಾವಿ ಕಾರ್ಯಕ್ರಮ ನೇರ ಪ್ರಸಾರ ಮಾಡಬೇಕು. ಅದಕ್ಕಾಗಿ ಎಲ್‍ಇಡಿ ಪರದೆ ಅಥವಾ ಟಿವಿ ವ್ಯವಸ್ಥೆ ಮಾಡಿಕೊಳ್ಳಬೇಕು. ಫಲಾನುಭವಿಗಳು ಮತ್ತು ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಸೇರಿಸಬೇಕು. ಸರ್ಕಾರಿ ಕಟ್ಟಡಗಳು ಅಥವಾ ಸಭಾ ಭವನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು. ಇದಕ್ಕೆ ಎಲ್ಲ ಸಿದ್ಧತೆ ಮಾಡಬೇಕು.

ಇದನ್ನೂ ಓದಿ – ‘ಶರಾವತಿ ಸಂತ್ರಸ್ತರ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ, ರೈತರ ಹಿತ ಕಾಯಲು ಕಾನೂನು ಸಮರಕ್ಕು ಸಿದ್ಧ’

POINT 2 jpgಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾ.ಪಂ.ಗಳಲ್ಲಿ, ಮಹಾನಗರ ಪಾಲಿಕೆ ಹಾಗೂ ನಗರಸಭೆಗಳಲ್ಲಿ ಪ್ರತಿ ವಾರ್ಡುಗಳು, ಪುರಸಭೆಗಳಲ್ಲಿ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ 3 ರಿಂದ 4 ವಾರ್ಡುಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಮಳೆಗಾಲವಾದ್ದರಿಂದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು.

DC Dr Selvamani Meeting about Gruhalakshmi Scheme

POINT 3 jpgತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾ.ಪಂ ಗಳಲ್ಲಿ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ ಈಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ನೋಡಲ್ ಅಧಿಕಾರಿಗಳು ಕಾರ್ಯಕ್ರಮದ ಸಿದ್ಧತೆ ಗಮನಿಸಿ ವರದಿ ಸಲ್ಲಿಸಬೇಕು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರು ಗ್ರಾಮ ಪಂಚಾಯಿತಿವಾರು ಉಸ್ತುವಾರಿ ನೋಡಿಕೊಳ್ಳಬೇಕು. ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕುಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದರೆ ಸರಿಪಡಿಸಿ ಸಿದ್ದತೆ ಆರಂಭಿಸಬೇಕು. ಎಲ್ಲ ತಾಲ್ಲೂಕುಗಳ ಸಿಡಿಪಿಓಗಳು ಕಾರ್ಯಕ್ರಮದ ತಯಾರಿ ಕುರಿತು ಮೇಲ್ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು. ಪ್ರತಿ ಗ್ರಾ.ಪಂ.ಯಲ್ಲಿ ಫಲಾನುಭವಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಹಾಜರಾಗುವಂತೆ ಕ್ರಮ ವಹಿಸಬೇಕು.ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪಂಚಾಯಿತಿ ಸಿಇಓ

ಇದನ್ನೂ ಓದಿ – ‘ಲೈಕ್‌, ಷೇರ್‌ ಮಾಡಿ, ಹಣ ಗಳಿಸಿʼ, ನಂಬಿದ ಶಿವಮೊಗ್ಗದ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಕಾದಿತ್ತು ಆಘಾತ

ಸಭೆಯಲ್ಲಿ ತಹಶೀಲ್ದಾರ್ ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಸಂತೋಷ ಕುಮಾರ್, ಸಿಡಿಪಿಓ ಚಂದ್ರಪ್ಪ, ತಾಲ್ಲೂಕುಗಳ ತಹಶೀಲ್ದಾರರು, ಇಓ, ಸಿಡಿಪಿಓ, ಸ್ಥಳೀಯ ಸಂಸ್ಥೆ ಮುಖ್ಯಸ್ಥರು ಹಾಜರಿದ್ದರು.

PARISHRAMA neet academy

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 16, 2023

Three killed, several injured in soil cave-in at Hulikal Ghat

Three killed, several injured in soil cave-in at Hulikal Ghat

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

BREAKING NEWS – ಹುಲಿಕಲ್‌ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

PU RESULT: ಶಿವಮೊಗ್ಗದ ಮಹೀನ್‌ ಖಾನಮ್‌ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಇವತ್ತಿನ ಅಡಿಕೆ ರೇಟ್‌, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

ಪುಟ್ಟಪ್ಪ ಕ್ಯಾಂಪ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ಮಹಿಳೆ ಕಾದಿತ್ತು ಆಘಾತ, ಆಗಿದ್ದೇನು?

ರಾಜ್ಯ ಪ್ರಶಸ್ತಿ, ಅರ್ಜಿ ಸಲ್ಲಿಸಲು ಏಪ್ರಿಲ್‌ 11 ಕೊನೆಯ ದಿನ

ರಾಜ್ಯ ಪ್ರಶಸ್ತಿ, ಅರ್ಜಿ ಸಲ್ಲಿಸಲು ಏಪ್ರಿಲ್‌ 11 ಕೊನೆಯ ದಿನ

ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

ಆಟೋ ಚಾಲಕರನ್ನು ರಕ್ಷಿಸಿ, ಶಿವಮೊಗ್ಗ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಕೆ, ಕಾರಣವೇನು?

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಸಾಗರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸೂಚನೆ, ಎಲ್ಲಿ?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

ಶಿವಮೊಗ್ಗದ ವಿದ್ಯಾರ್ಥಿನಿಗೆ ಸಂಕಷ್ಟ ತಂದ ಇನ್‌ಸ್ಟಾಗ್ರಾಂ ಲಿಂಕ್‌, ಆಗಿದ್ದೇನು?

Leave a Comment