ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 26 AUGUST 2023
RIPPONPETE : ಚಾಲಕನ ನಿಯಂತ್ರಣ ತಪ್ಪಿದ 16 ಚಕ್ರದ ಲಾರಿ (Truck) ಪಲ್ಟಿಯಾಗಿದೆ. ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಿಪ್ಪನ್ಪೇಟೆ ಸಮೀಪದ ಸೂಡುರು (Suduru) ಬಳಿ ರಾಜ್ಯ ಹೆದ್ದಾರಿಯಲ್ಲಿ (State Highway) ಘಟನೆ ಸಂಭವಿಸಿದೆ. ಅದಿರು (Ore) ತುಂಬಿಕೊಂಡು ಹೊಸನಗರದ ಕಡೆಯಿಂದ ಶಿವಮೊಗ್ಗದ ಕಡೆಗೆ ಲಾರಿ ತೆರಳುತ್ತಿತ್ತು. ಎದುರಿನಿಂದ ಬಂದ ಕಾರಿಗೆ ದಾರಿ ಬಿಡುವಾಗ ಲಾರಿಯು ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ.
ಇದನ್ನೂ ಓದಿ – ಬಸ್-ಬೈಕ್ ಡಿಕ್ಕಿ, ಯುವಕ ಸ್ಥಳದಲ್ಲೆ ಸಾವು, ಹುಟ್ಟುಹಬ್ಬದ ಮರುದಿನವೆ ವಿಧಿಯ ಕರಾಳ ಆಟ
ಚಾಲಕ ಮುಸ್ತಫಾ ಮತ್ತು ನಿರ್ವಾಹಕ ರಿಜ್ವಾನ್ ಎಂಬುವವರಿಗೆ ಗಾಯವಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಿಪ್ಪನ್ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















