NEWS HIGHLIGHTS
SHIVAMOGGA LIVE NEWS | 26 AUGUST 2023
➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.SHIMOGA : ನಗರದ ಸಾಗರ ರಸ್ತೆಯ ನಂಜಪ್ಪ ಲೈಫ್ ಕೇರ್‌ನಲ್ಲಿ ನಂಜಪ್ಪ ಕ್ಯಾನ್ಸರ್ ಕೇರ್ (Cancer Care) ಆರಂಭವಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಾಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯವನ್ನು ನಂಜಪ್ಪ ಕ್ಯಾನ್ಸರ್ ಕೇರ್ ಸೆಂಟರ್ ಹೊಂದಿದೆ.

ಶುಕ್ರವಾರ ಗಣ ಹೋಮ ಹಾಗೂ ವರಮಹಾಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಮಾಡುವ ಮೂಲಕ ನಂಜಪ್ಪ ಕ್ಯಾನ್ಸರ್ ಕೇರ್ ಗೆ ಜಾಲನೆ ನೀಡಲಾಯಿತು.
ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ, ವೈದ್ಯಕೀಯ ಕ್ಯಾನ್ಸರ್ ಚಿಕಿತ್ಸೆ, ವಿಕಿರಣ ಶಾಸ್ತ್ರ, ಪೆಟ್ ಸಿಟಿ ಸೇರಿದಂತೆ ಹಲವು ಸೌಲಭ್ಯ ನಂಜಪ್ಪ ಕ್ಯಾನ್ಸರ್ ಕೇರ್‌ನಲ್ಲಿ ದೊರೆಯಲಿವೆ. ಕ್ಯಾನರ್ ಚಿಕಿತ್ಸೆಗಾಗಿ ದೂರದ ಊರಿಗೆ ಹೋಗುವ ಬದಲು ಶಿವಮೊಗ್ಗದಲ್ಲಿಯೆ ಸಂಪೂರ್ಣ ಚಿಕಿತ್ಸೆ ಪಡೆಯ ಬಹುದಾಗಿದೆ.

