ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 31 AUGUST 2023
SHIMOGA : ಜಿಲ್ಲೆಯ ಜನರ ಬಹು ಸಮಯದ ಕನಸು ನನಸಾಗಿದೆ. ಇಂಡಿಗೋ (Indigo Flight) ಸಂಸ್ಥೆಯ ಎಟಿಆರ್ 72 ಮಾದರಿ ವಿಮಾನ ಶಿವಮೊಗ್ಗಕ್ಕೆ (Shimoga Airport) ಆಗಮಿಸಿತ್ತು. ಈ ವಿಮಾನಕ್ಕೆ ಜಿಲ್ಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಬೆಂಗಳೂರಿನಲ್ಲು ಇಂಡಿಗೋ ಸಂಭ್ರಮ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆಯ ಎಟಿಆರ್ 72 ವಿಮಾನ ಬೆಳಗ್ಗೆ 9.47ಕ್ಕೆ ಹಾರಾಟ ಆರಂಭಿಸಿತು. ಇದಕ್ಕೂ ಮೊದಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಬಿ.ವೈ.ವಿಜಯೇಂದ್ರ, ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಹರತಾಳು ಹಾಲ್ಪಪ ಸೇರಿದಂತೆ ಹಲವು ಗಣ್ಯರು ಇಂಡಿಗೋ ಸಂಸ್ಥೆಯ ಸಿಬ್ಬಂದಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಎರಡು ಸಾವಿರ ಅಡಿ ಎತ್ತರ ಹಾರಾಟ
ಬೆಂಗಳೂರಿನಿಂದ ಹೊರಟ ವಿಮಾನ 2,700 ಅಡಿ ಎತ್ತರದಲ್ಲಿ ಹಾರಾಟ ನಡೆಸಿತು. ಶಿವಮೊಗ್ಗದಲ್ಲಿ ಆಗಸದಲ್ಲೆ ವಿಮಾನ ನಿಲ್ದಾಣದ ಸುತ್ತಲು ಒಂದು ಸುತ್ತು ಹಾಕಿತು. ಬಳಿಕ ಓತಿಘಟ್ಟ ಕಡೆಯಿಂದ ಲ್ಯಾಂಡ್ ಆದ ವಿಮಾನ ನೇರವಾಗಿ ಟರ್ಮಿನಲ್‌ವರೆಗೆ ತಲುಪಿತು.
ವಿಮಾನಕ್ಕೆ ವಾಟರ್ ಸಲ್ಯೂಟ್
ವೈಮಾನಿಕ ಕ್ಷೇತ್ರದಲ್ಲಿ ಹೊಸ ವಿಮಾನಗಳಿಗೆ ವಾಟರ್ ಸಲ್ಯೂಟ್ ಸಲ್ಲಿಸಲಾಗುತ್ತದೆ. ಅದೇ ಮಾದರಿ ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಪಕ್ಕದಲ್ಲಿ ಇಂಡಿಗೋ ವಿಮಾನಕ್ಕೆ ವಾಟರ್ ಸಲ್ಯೂಟ್ ಸಲ್ಲಿಸಲಾಯಿತು. ಎರಡು ಫೈರ್ ಇಂಜಿನ್ ವಾಹನಗಳ ಮೂಲಕ ನೀರನ್ನು ಮೇಲಕ್ಕೆ ಹಾಯಿಸಲಾಯಿತು. ಇದರ ವಿಡಿಯೋ ಇಲ್ಲಿದೆ.
View this post on Instagram
ಧ್ವಜ ಹಿಡಿದು ಖುಷಿ
ಶಿವಮೊಗ್ಗ ವಿಮಾನ ನಿಲ್ದಾಣದ ಹ್ಯಾಂಗರ್‌ನಲ್ಲಿ ವಿಮಾನದಿಂದ ಕೆಳಗಿಳಿದ ಗಣ್ಯರು ತ್ರಿವರ್ಣ ಧ್ವಜ ಪ್ರದರ್ಶಿಸಿದರು. ಇದೇ ವೇಳೆ ಇಂಡಿಗೋ ಸಂಸ್ಥೆಯ ಸಿಬ್ಬಂದಿ ಎಲ್ಲರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು. ಇದರ ವಿಡಿಯೋ ಇಲ್ಲಿದೆ.
View this post on Instagram
ವೆಬ್‌ಸೈಟ್ ಅನಾವರಣ, ವೇದಿಕೆ ಕಾರ್ಯಕ್ರಮ
ಇನ್ನು, ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನದ ಆಗಮನದ ಹಿನ್ನೆಲೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೆ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣದ ವೆಬ್‌ಸೈಟ್ ಅನಾವರಣ ಮಾಡಲಾಯಿತು.
ಮಧ್ಯಾಹ್ನ ಬೆಂಗಳೂರಿನತ್ತ ವಿಮಾನ
ಕಾರ್ಯಕ್ರಮ ಮತ್ತು ಗಣ್ಯರು ವಿಮಾನದ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದರಿಂದ ಇಂಡಿಗೋ ವಿಮಾನ ಶಿವಮೊಗ್ಗದಿಂದ ತಡವಾಗಿ ಪ್ರಯಾಣ ಆರಂಭಿಸಿತು. ಮಧ್ಯಾಹ್ನ 12.08ಕ್ಕೆ ಶಿವಮೊಗ್ಗದಿಂದ ಹಾರಾಟ ಆರಂಭಿಸಿತು. ಸಚಿವರಾದ ಎಂ.ಬಿ.ಪಾಟೀಲ್, ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422