ಶಿವಮೊಗ್ಗ ಶೃತಿ ಮೋಟರ್ಸ್‌ಗೆ 25ನೇ ವರ್ಷಾಚರಣೆ, ಮಾಲೀಕರ ಸ್ಮರಣೆ, ಯಾರೆಲ್ಲ ಏನೇನು ಹೇಳಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 SEPTEMBER 2023

SHIMOGA : ಮಾತನಾಡುವುದೆ ಸಾಧನೆಯಲ್ಲ. ಕಾರ್ಯಸಾಧನೆ ಮಾತನಾಡಬೇಕು. ಉದ್ಯಮಿ ಡಿ.ಟಿ.ಪರಮೇಶ್‌ ಅವರ ಕಾರ್ಯ ಸಾಧನೆ ಅನುಕರಣೀಯ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಎಂದರು.

ಶಂಕರಮಠ ರಸ್ತೆಯ ಶೃತಿ ಮೋಟರ್ಸ್‌ ಶೋ ರೂಂನಲ್ಲಿ (Show Room) ಡಿ.ಟಿ.ಪರಮೇಶ್‌ ಅವರ ಸವಿನೆನಪು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾವಿರಾರು ಕುಟುಂಬಕ್ಕೆ ಈ ಸಂಸ್ಥೆ ಜೀವನಾಧಾರವಾಗಿದೆ. ಪರಮೇಶ್‌ ಅವರ ಪ್ರೀತಿಯ ಮಾತು, ಸಂಸ್ಕಾರವನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಶ್ರೀಗಳು ಸಲಹೆ ನೀಡಿದರು.

ಶಿವಮೊಗ್ಗ ಕೃಷಿ ಆಧಾರಿತ ಜಿಲ್ಲೆ. 1980ರ ದಶಕದಿಂದ ಈಚೆಗೆ ಇಲ್ಲಿ ಕೈಗಾರಿಕೆ ಕ್ಷೇತ್ರ ವಿಸ್ತಾರಗೊಂಡಿತು. ಈ ಕ್ಷೇತ್ರದ ಅಭಿವೃದ್ಧಿಗೆ ಡಿ.ಟಿ.ಪರಮೇಶ್‌ ಅವರ ಕೊಡುಗೆ ದೊಡ್ಡದು. ನೇರ ನುಡಿ, ಚುಟುವಟಿಕೆಯಿಂದ ಇದ್ದರು. ಜೊತೆಗಾರರನ್ನು ಗೌರವದಿಂದ ಕಾಣುತ್ತಿದ್ದರು.ಡಿ.ಎಸ್.‌ ಅರುಣ್‌, ವಿಧಾನ ಪರಿಷತ್‌ ಸದಸ್ಯ
ಹಾಸನದಿಂದ ಶಿವಮೊಗ್ಗಕ್ಕೆ ಆಗಮಿಸಿದ ಡಿ.ಟಿ.ಪರಮೇಶ್‌ ಅವರು ಇಲ್ಲಿಯ ಜನರ ಮನೋಭಾವಕ್ಕೆ ತಕ್ಕ ಹಾಗೆ ಸ್ಪಂದಿಸಿದ್ದಾರೆ. ಇದೇ ಕಾರಣಕ್ಕೆ ಇವತ್ತು ಮನೆ ಮನೆಗೆ ಮಾರುತಿ ಕಾರುಗಳು ತಲುಪಿವೆ. 25ನೇ ವರ್ಷಿಕೋತ್ಸವದ ಸಂದರ್ಭ ಡಿ.ಟಿ.ಪರಮೇಶ್‌ ಅವರನ್ನು ಕಳೆದುಕೊಂಡಿದ್ದು ನೋವಿನ ಸಂಗತಿ.ಕೆ.ಟಿ.ಗಂಗಾಧರ್‌, ರೈತ ನಾಯಕ

Shruti Motors

ಪರಮೇಶ್‌ ಅವರದ್ದು ಗಂಭೀರ ದೃಷ್ಟಿ. ತಂದೆಯ ರೀತಿ ಸ್ಪಂದಿಸುವ ಅಂತಃಕರಣ. ಅವರಲ್ಲಿ ದುಡಿಮೆಯ ಸಂಕಲ್ಪವಿತ್ತು. ಇವೆಲ್ಲ ಕಾರಣದಿಂದಾಗಿ ಜಿಲ್ಲೆಯ ಉದ್ಯಮ ಕ್ಷೇತ್ರದಲ್ಲಿ ಅವರು ಯಶಸ್ವಿಯಾದರು.ಡಿ.ಮಂಜುನಾಥ್‌, ಜಿಲ್ಲಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು

ಶೃತಿ ಮೋಟರ್ಸ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಮೋಹನ್‌.ಡಿ.ಪಿ, ಡಾ.ಆಶ್ವತ್‌ ನಾರಾಯಣ ಶೆಟ್ಟಿ, ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಇದ್ದರು. ಇದೇ ವೇಳೆ ಡಿ.ಟಿ.ಪರಮೇಶ್‌ ಅವರಿಗೆ ಶೃತಿ ಮೋಟರ್ಸ್‌ ಸಿಬ್ಬಂದಿ ಗೌರವ ಸಲ್ಲಿಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಆಟೋಮ್ಯಾಟಿಕ್‌ ದಂಡ, ನಿಮ್ಮ ಗಾಡಿ ಮೇಲೆ ಕೇಸ್‌ ಇದೆಯಾ? ತಿಳಿಯಲು ಇಲ್ಲಿದೆ 2 ಮಾರ್ಗ – JUST ಮಾಹಿತಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment