ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 4 SEPTEMBER 2023
SHIMOGA : ಹೊಸ ಆಟೋಗಳನ್ನು (Shimoga Auto) ನಗರದಲ್ಲಿ ಓಡಿಸಲು ಪರವಾನಿಗೆ ನೀಡಬೇಕು ಎಂದು ಆಗ್ರಹಿಸಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ನಗರದಲ್ಲಿ ಸುಮಾರು ಒಂದು ಸಾವಿರ ಹೊಸ ಆಟೋಗಳು ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿವೆ. ಆದರೆ ಈ ಆಟೋಗಳು ನಗರದಲ್ಲಿ ಸಂಚರಿಸಲು ಪರವಾನಿಗೆ ನೀಡಿಲ್ಲ. ಪರವಾನಿಗೆ ಇಲ್ಲದೆ ಆಟೋಗಳನ್ನು ಬಾಡಿಗೆಗೆ ಓಡಿಸಲು ಆಗುವುದಿಲ್ಲ. ಸಾಲ ಮಾಡಿ ಆಟೋ ಖರೀದಿಸಿದ್ದವರು ಈಗ ಸಂಕಷ್ಟಕ್ಕೀಡಾಗಿದ್ದಾರೆ. ಸಾಲ ತೀರಿಸಲು ಆಗದ ಪರಿಸ್ಥಿತಿ ಇದೆ. ಸಾಲ ಕೊಟ್ಟ ಸಂಸ್ಥೆಯವರು ಮನೆ ಬಾಗಲಿಗೆ ಬಂದು ನಿಲ್ಲುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ನಗರದಲ್ಲಿ ಆಟೋ (Shimoga Auto) ಸಂಚಾರಕ್ಕೆ ಕೂಡಲೆ ಪರವಾನಿಗೆ ನೀಡಬೇಕು ಎಂದು ಮನವಿ ಮಾಡಿದರು. ಅಲ್ಲದೆ ಪರವಾನಿಗೆ ಇಲ್ಲದೆ ಇರುವ ಆಟೋಗಳ ನೋಂದಣಿ ಸಂಖ್ಯೆ ಸಹಿತ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ತಲುಪಿಸಿದರು.
ಇದನ್ನೂ ಓದಿ – ಶಿವಮೊಗ್ಗ ಶೃತಿ ಮೋಟರ್ಸ್‌ಗೆ 25ನೇ ವರ್ಷಾಚರಣೆ, ಮಾಲೀಕರ ಸ್ಮರಣೆ, ಯಾರೆಲ್ಲ ಏನೇನು ಹೇಳಿದರು?
ಆಟೋ ಚಾಲಕರಾದ ಎನ್.ಸೋಮಶೇಖರ್, ಸತ್ಯನಾರಾಯಣ, ಶ್ರೀಕಾಂತ, ರಾಕೇಶ್, ಶರತ್, ಅನಿಲ್ ಕುಮಾರ್ ಸೇರಿದಂತೆ ಹಲವರು ಇದ್ದರು.

LATEST NEWS
- ಶಿವಮೊಗ್ಗ, ಶಿಕಾರಿಪುರ, ಸಾಗರದ ಐದು ಕಡೆ ಲೋಕಾಯುಕ್ತ ದಾಳಿ, ಪರಿಶೀಲನೆ

- ಹೊಸನಗರ ಕ್ಷೇತ್ರ ಮರು ರಚನೆ, ಪಾದಯಾತ್ರೆ ಸಮಾರೋಪ, ಸಚಿವ, ಸಂಸದರು ಏನಂದ್ರು?

- ಎದುರು ಮನೆಗೆ ನುಗ್ಗಿದ್ದ ಭದ್ರಾವತಿ ವ್ಯಕ್ತಿಗೆ ಜೈಲು, ದಂಡ, ಎಷ್ಟು ವರ್ಷ ಶಿಕ್ಷೆ?

- ಭದ್ರಾವತಿ ತಾಲೂಕಿನ ಹಲವು ಕಡೆ ಇವತ್ತು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ KSRTC ನಿಲ್ದಾಣದಲ್ಲಿ ಭದ್ರಾವತಿ ಮಹಿಳೆಯ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನ

About The Editor
ನಿತಿನ್ ಆರ್.ಕೈದೊಟ್ಲು












