ಖಾಸಗಿ ಸಂಸ್ಥೆ ಡ್ಯೂಟಿ ಮ್ಯಾನೇಜರ್‌ ಮೇಲೆ ಗಾಂಧಿ ಬಜಾರ್‌ನಲ್ಲಿ ಹಲ್ಲೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 SEPTEMBER 2023

SHIMOGA : ಸ್ನೇಹಿತೆಯರನ್ನು ಮನೆಗೆ ಬಿಡಲು ತೆರಳಿದ್ದ ಖಾಸಗಿ ಸಂಸ್ಥೆ ಡ್ಯೂಟಿ ಮ್ಯಾನೇಜರ್‌ ಸಂಜಯ್‌ ಕುಮಾರ್‌ ಎಂಬುವವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ (ASSAULT) ಮಾಡಿದ್ದಾನೆ. ಗಾಂಧಿ ಬಜಾರ್‌ ಸಿನಿಮಾ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ – ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಪುತ್ರನ ವಿರುದ್ಧ ದೂರು

ಸಂಜಯ್‌ ಕುಮಾರ್‌ ಅವರ ಸ್ನೇಹಿತೆಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸೆ.5ರ ರಾತ್ರಿ ಬೈಕಿನಲ್ಲಿ ಮನೆಗೆ ಕರೆತಂದು ಬಿಟ್ಟಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಸಂಜಯ್‌ ಕುಮಾರ್‌ಗೆ ‘ನಮ್ಮ ಏರಿಯಾಗೆ ಹುಡುಗಿಯರನ್ನು ಕರೆತಂದು ಮಾತನಾಡುತ್ತಿದ್ದೀಯʼ ಎಂದು ಪ್ರಶ್ನಿಸಿ ಹಲ್ಲೆ (ASSAULT) ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಸಂಜಯ್‌ ಕುಮಾರ್‌ನನ್ನು ಸೇಹಿತೆಯರು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 7, 2023

Leave a Comment