ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಮಂಜುನಾಥ ಗೌಡ ಮರು ಪ್ರವೇಶ, ಕುತೂಹಲ ಮೂಡಿಸಿದ ನೇಮಕ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 SEPTEMBER 2023

SHIMOGA : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ (DCC Bank) ನಿರ್ದೇಶಕರಾಗಿ ಆರ್‌.ಎಂ.ಮಂಜುನಾಥಗೌಡ ಅವರನ್ನು ಆಡಳಿತ ಮಂಡಳಿ ಕೋ ಅಪ್‌ ಮಾಡಿ ನೇಮಕ ಮಾಡಿದೆ. ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ಅವರನ್ನು ನೇಮಿಸಲಾಗಿದೆ.

ಡಿಸಿಸಿ ಬ್ಯಾಂಕ್‌ (DCC Bank) ಸಭಾಂಗಣದಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ದೇಶಕರಾದ ಆರ್‌.ಎಂ.ಮಂಜುನಾಥ ಗೌಡ ಅವರನ್ನು ಸ್ವಾಗತಿಸಲಾಯಿತು.

RM Manjunatha Gowda

ನಿರ್ದೇಶಕರಾಗಿದ್ದ ದುಗ್ಗಪ್ಪಗೌಡ ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿದ್ದರು. ಆ ಸ್ಥಾನಕ್ಕೆ ಮಂಜುನಾಥಗೌಡ ಅವರನ್ನು ಕೋ ಅಪ್‌ ಮೂಲಕ ನಿರ್ದೇಶಕರಾಗಿ ನೇಮಿಸಲಾಗಿದೆ.

ತೆರವಾದ ಸ್ಥಾನಕ್ಕೆ ಚುನಾವಣೆ ಯಾಕಿಲ್ಲ?

ನಿರ್ದೇಶಕರೊಬ್ಬರು ಎರಡೂವರೆ ವರ್ಷ ಅಧಿಕಾರ ಪೂರೈಸಿ ರಾಜೀನಾಮೆ ನೀಡಿದರೆ ಮರು ಚುನಾವಣೆ ನಡೆಸಬಹುದು. ಅಥವಾ ಕೋ ಅಪ್‌ ಮೂಲಕ ಆಡಳಿತ ಮಂಡಳಿಯೇ ಮತ್ತೊಬ್ಬ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳಬಹುದು. ಇದೇ ಕಾರಣಕ್ಕೆ ಕೃಷಿ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿದ್ದ ದುಗ್ಗಪ್ಪಗೌಡ ರಾಜೀನಾಮೆ ನೀಡಿದರು ಮರು ಚುನಾವಣೆಯಾಗದೆ ಆರ್‌.ಎಂ.ಮಂಜುನಾಥ ಗೌಡ ಅವರನ್ನು ನಿರ್ದೇಶಕರಾಗಿ ನೇಮಿಸಲಾಗಿದೆ.

ಅಪೆಕ್ಸ್‌ ಬ್ಯಾಂಕ್‌ ಪ್ರತಿನಿಧಿ

ಇತ್ತ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ಅಪೆಕ್ಸ್‌ ಬ್ಯಾಂಕ್‌ನ (Apex Bank) ಪ್ರತಿನಿಧಿಯಾಗಿ ದುಗ್ಗಪ್ಪ ಗೌಡ ಅವರನ್ನು ನೇಮಿಸಲಾಗಿದೆ. ಈ ಮೂಲಕ ಅವರು ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.

Duggappa Gowda DCC Bank Umblebyle

ಇದನ್ನೂ ಓದಿ – ಶಿವಮೊಗ್ಗ ಡಿಸಿಸಿ ಬ್ಯಾಂಕ್‌, ಅಭ್ಯರ್ಥಿ ನೇಮಕಾತಿ ಅವ್ಯವಹಾರ ತನಿಖೆಗೆ ಟೀಮ್‌ ರಚನೆ

ಮರು ಚುನಾವಣೆಗೆ ಅಧಿಸೂಚನೆ

ಮಂಜುನಾಥ ಗೌಡ ಅವರ ಮೂಲ ಸ್ಥಾನ ತೆರವಾಗಿದ್ದು, ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ಶಿವಮೊಗ್ಗ ಉಪ ವಿಭಾಗದ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ಇತರೆ ಮಾರಾಟ, ಸಂಸ್ಕರಣ ಸಹಕಾರ ಸಂಘಗಳ ಕ್ಷೇತ್ರದಿಂದ ಮಂಜುನಾಥ ಗೌಡ ಆಯ್ಕೆಯಾಗಿದ್ದರು. ಅವರು ನಿರ್ದೇಶಕ ಸ್ಥಾನ ಕಳೆದುಕೊಂಡ ಹಿನ್ನೆಲೆ ಅ.11ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಈ ಚುನಾವಣೆ ಪ್ರಕ್ರಿಯೆ ಇನ್ನಷ್ಟೆ ಆರಂಭವಾಗಬೇಕಿದೆ.

ಇದನ್ನೂ ಓದಿ – ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅ‍ಧ್ಯಕ್ಷರ ಪದಚ್ಯುತಿ, ಯಾರೆಲ್ಲ ಯಾರ ಪರ ಮತ ಚಲಾಯಿಸಿದರು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಮತ್ತೆ ಅಧ್ಯಕ್ಷರಾಗ್ತಾರಾ ಮಂಜುನಾಥ ಗೌಡ?

ಅವಿಶ್ವಾಸ ನಿರ್ಣಯ ಮಂಡಿಸಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಚನ್ನವೀರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ. ಉಪಾಧ್ಯಕ್ಷರಾಗಿದ್ದ ಷಡಾಕ್ಷರಿ ಅವರು ಹಂಗಾಮಿ ಅಧ್ಯಕ್ಷರಾಗಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಈಗ ಮಂಜುನಾಥ ಗೌಡ ನಿರ್ದೇಶಕರಾಗಿದ್ದು ಅವರು ಅ‍ಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಬಹುತೇಕ ಖಚಿತ. ಪುನಃ ಡಿಸಿಸಿ ಬ್ಯಾಂಕ್‌ಗೆ ಮಂಜುನಾಥ ಗೌಡ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಅವರ ನೇಮಕ ತೀವ್ರ ಕುತೂಹಲ ಮೂಡಿಸಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment