ಶಿವಮೊಗ್ಗದ ಶಿವಮೂರ್ತಿ ಸರ್ಕಲ್‌ನಿಂದ ಡಿ.ಸಿ.ಕಾಂಪೌಂಡ್‌ ತನಕ ವಾಹನ ಪಾರ್ಕಿಂಗ್‌, ನೋ ಪಾರ್ಕಿಂಗ್‌ಗೆ ಅಧಿಸೂಚನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 SEPTEMBER 2023

SHIMOGA : ನಗರದ ಜಯನಗರ ಮುಖ್ಯ ರಸ್ತೆಯಲ್ಲಿ ವಾಹನ ಪಾರ್ಕಿಂಗ್‌ ಮತ್ತು ನೋ ಪಾರ್ಕಿಂಗ್‌ಗೆ (No Parking) ಸ್ಥಳ ಗುರುತಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅಧಿಸೂಚನೆ ಹೊರಡಿಸಿದ್ದಾರೆ.

ಅಧಿಸೂಚನೆಗೆ ಕಾರಣವೇನು?

ಶಿವಮೂರ್ತಿ ಸರ್ಕಲ್‌ನಲ್ಲಿ ಮೆಟ್ರೋ ಆಸ್ಪತ್ರೆ ಇದೆ. ಜಯನಗರ ಮುಖ್ಯ ರಸ್ತೆಯಲ್ಲಿ ನೆಹರು ಕ್ರೀಡಾಂಗಣದ ಗೇಟ್‌, ಸರ್ವೋದಯ ಶಿಕ್ಷಣ ಸಂಸ್ಥೆ ಇದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪಾರ್ಕಿಂಗ್‌ ಮತ್ತು ನೋ ಪಾರ್ಕಿಂಗ್‌ ಸ್ಥಳ ಗುರುತಿಸಿ ಅಧಿಸೂಚನೆ ಹೊರಡಿಸಲಾಗಿದೆ

ಎಲ್ಲೆಲ್ಲಿ ನೋ ಪಾರ್ಕಿಂಗ್‌?

ಜಯನಗರ ಮುಖ್ಯ ರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಡಿ.ಸಿ. ಕಾಂಪೌಂಡ್‍ವರೆಗೆ ಎಡಭಾಗ ಮತ್ತು ಜಯನಗರ ಮುಖ್ಯರಸ್ತೆಯಲ್ಲಿ ಶಿವಮೂರ್ತಿ ಸರ್ಕಲ್‍ನಿಂದ ಜಯನಗರ 1ನೇ ಕ್ರಾಸ್ ಬಲಭಾಗ ಎಲ್ಲಾ ವಾಹನಗಳ ನಿಲುಗಡೆ ನಿಷೇದಿಸಲಾಗಿದೆ (No Parking).

ಎಲ್ಲೆಲ್ಲಿ ಪಾರ್ಕಿಂಗ್‌ ಇದೆ?

ಜಯನಗರ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯದಿಂದ ಡಿ.ಸಿ. ಕಾಂಪೌಂಡ್‍ವರೆಗೆ ಬಲಭಾಗ ವಾಹನಗಳ ನಿಲುಗಡೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುತ್ತಾರೆ.

ಇದನ್ನೂ ಓದಿ – ಕರ್ನಾಟಕ ಸಂಘದಲ್ಲಿ ಕಾರು ತಡೆದ ಪೊಲೀಸ್‌, ಡ್ರೈವರ್‌ ತಂದೆಗೆ 25 ಸಾವಿರ ರೂ. ಫೈನ್‌, ಏನಿದು ಕೇಸ್?‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 12, 2023

Leave a Comment