BREAKING NEWS – ಆಯನೂರು ಸಮೀಪ ಅಪಘಾತ, ವ್ಯಕ್ತಿ ಸ್ಥಳದಲ್ಲೇ ಸಾವು, ಬೈಕ್‌ ನಜ್ಜುಗುಜ್ಜು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 SEPTEMBER 2023

AYANURU : ಖಾಸಗಿ ಬಸ್‌ (Private Bus) ಮತ್ತು ಬೈಕ್‌ (Bike) ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್‌ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಅಪಘಾತದ ರಭಸಕ್ಕೆ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದೆ.

ಹೊಸನಗರ ತಾಲೂಕಿನ ಗುರುಮೂರ್ತಿ (36) ಮೃತ ಬೈಕ್‌ ಸವಾರ. ಗುರುಮೂರ್ತಿ ಅವರು ಆಯನೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಖಾಸಗಿ ಬಸ್‌ ರಿಪ್ಪನ್‌ಪೇಟೆ ಕಡೆಯಿಂದ ಆಯನೂರಿಗೆ ಸಾಗುತ್ತಿತ್ತು. ಚಿನ್ಮನೆ ಸಮೀಪ ಅಪಘಾತ ಸಂಭವಿಸಿದೆ. ಗಂಭೀರ ಗಾಯವಾಗಿ ರಕ್ತಸ್ರಾವ ಉಂಟಾಗಿ ಬೈಕ್‌ ಸವಾರ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ – ಕರ್ನಾಟಕ ಸಂಘದಲ್ಲಿ ಕಾರು ತಡೆದ ಪೊಲೀಸ್‌, ಡ್ರೈವರ್‌ ತಂದೆಗೆ 25 ಸಾವಿರ ರೂ. ಫೈನ್‌, ಏನಿದು ಕೇಸ್?‌

ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment