ಶಿವಮೊಗ್ಗದಲ್ಲಿ ವಿಜೃಂಭಣೆಯ ಗಣೇಶ ಚತುರ್ಥಿ, ಪ್ರತಿಷ್ಠಾಪನೆ ಆಯ್ತು ‘ಹಿಂದೂ ಮಹಾಸಭʼ ಗಣಪತಿ, ಎಲ್ಲೆಲ್ಲಿ ಹೇಗಿತ್ತು ವೈಭವ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 SEPTEMBER 2023

SHIMOGA : ನಗರದಾದ್ಯಂತ ಗಣೇಶ ಚತುರ್ಥಿಯನ್ನು (Ganesh Chaturthi) ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ಹಲವು ಬಡಾವಣೆಗಳಲ್ಲಿ ಗಜಮುಖನನ್ನು ಪ್ರತಿಷ್ಠಾಪಿಸಲಾಗಿದ್ದು, ಪೂಜೆ, ನೈವೇದ್ಯ ಆರಂಭವಾಗಿದೆ. ದೇವಸ್ಥಾನಗಳಲ್ಲಿಯು ಮೋದಕ ಪ್ರಿಯನಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

ದೇಗುಲಗಳಲ್ಲಿ ಮೂಷಿಕ ವಾಹನಿಗೆ ಪೂಜೆ

ನಗರದ ರವೀಂದ್ರ ನಗರ ಶ್ರೀ ಗಣಪತಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಗಣಪತಿಗೆ ಇವತ್ತು ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆಯಿಂದಲು ದೊಡ್ಡ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ. ಗೌರಿ ಹಬ್ಬದ ಹಿನ್ನೆಲೆ ಗೌರಿಯ ಮೂರ್ತಿಗೂ ಪೂಜೆ ನೆರವೇರಿಸಲಾಯಿತು.

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ

ವಿವಿಧ ಬಡಾವಣೆಗಳಲ್ಲಿ ಪೆಂಡಾಲ್‌ಗಳನ್ನು ನಿರ್ಮಿಸಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿವಿಧ ಬಗೆಯ ಅಲಂಕಾರಗಳು, ಮಂಟಪಗಳನ್ನು ನಿರ್ಮಿಸಲಾಗಿದೆ. ವಿವಿಧ ಬಗೆ ಮತ್ತು ಗಾತ್ರದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಸೈನ್ಸ್‌ ಮೈದಾನ, ಕುಂಬಾರ ಬೀದಿ ಸೇರಿದಂತೆ ವಿವಿಧೆಡೆ ಗಣಪತಿ ಮೂರ್ತಿಗಳನ್ನು ಖರೀದಿಸಿ, ಮೆರವಣಿಗೆ ಮೂಲಕ ವಿವಿಧ ಬಡಾವಣೆಗಳ ಪೆಂಡಾಲ್‌ವರೆಗೆ ತರಲಾಗಿದೆ. ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಗಿದೆ.

ಹಿಂದೂ ಸಂಘಟನೆಗಳ ಗಣಪತಿ ಪ್ರತಿಷ್ಠಾಪನೆ

ಹಿಂದೂ ಸಂಘಟನೆಗಳ ಮಹಾ ಮಂಡಲದ ವತಿಯಿಂದ 79ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಕುಂಬಾರ ಬೀದಿಯಲ್ಲಿ ಗಣೇಶ ಅವರ ಮನೆಯಿಂದ ಕೋಟೆ ರಸ್ತೆ ಮೂಲಕ ಮೆರವಣಿಗೆಯಲ್ಲಿ ಗಣಪತಿ ಮೂರ್ತಿಯನ್ನು ತರಲಾಯಿತು. ಕೋಟೆ ‍ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

Hindu-Mahasabha-Ganapathi-in-Shimoga.webp

ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಘಟನೆಗಳ ಮಹಾ ಮಂಡಲದ ವತಿಯಿಂದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹಿಂದೂಗಳ ಅಪೇಕ್ಷೆಗೆ ತಕ್ಕ ಹಾಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೋಮ, ಹವನಗಳನ್ನು ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯು ಧಾರ್ಮಿಕ ವಿಧಿ – ವಿಧಾನಗಳು ನೆರವೇರಲಿದೆ. ಸೆ.27ರಂದು ವೀರ ಶಿವಮೂರ್ತಿಯವರ ಸ್ಮರಣೆ ನಡೆಯಲಿದೆ. ಮಹಾ ಮಂಗಳಾರತಿ, ಪ್ರಸಾದ ವಿನಿಯೋಗದ ವ್ಯವಸ್ಥೆ ಇರಲಿದೆ. ಸೆ.28ರಂದು ಅನಂತ ಚತುರ್ದಶಿ. ಆ ದಿನ ನಗರದ ರಾಜಬೀದಿಯಲ್ಲಿ ವಿಜೃಂಭಣೆಯಿಂದ ಗಣಪತಿಯ ಮೆರವಣಿಗೆ ನಡೆಯಲಿದೆ. ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡಲಿದ್ದೇವೆ.ಎಸ್‌.ಎನ್.‌ಚನ್ನಬಸಪ್ಪ, ಶಾಸಕ

ಇನ್ನು, ಮನೆಗಳಲ್ಲು ಗೌರಿ ಮತ್ತು ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು. ನಗರದಾದ್ಯಂತ ವಿಜೃಂಭಣೆಯಿಂದ ಗಣೇಶನಿಗೆ ಪೂಜೆ, ಧಾರ್ಮಿಕ ವಿಧಿ – ವಿಧಾನಗಳನ್ನು ನೆರವೇರಿಸಲಾಗುತ್ತಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ 2 ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ, ಯಾಕೆ? ಸಭೆಯಲ್ಲಿ ಯಾರೆಲ್ಲ ಏನೇನು ಹೇಳಿದರು?

Ganesh Chaturthi in Shimoga

Ganesh Chaturthi in Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment