ವಶಕ್ಕೆ ಪಡೆದ ವಾಹನಗಳು ಸೆ.26ರಂದು ಬಹಿರಂಗ ಹರಾಜು, ಯಾವೆಲ್ಲ ವಾಹನಗಳಿವೆ?

SHIVAMOGGA LIVE NEWS | 21 SEPTEMBER 2023

SHIMOGA : ಜಿಲ್ಲಾ ಅಬಕಾರಿ ಇಲಾಖೆಯು ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಬಹಿರಂಗ ಹರಾಜು (Auction) ಮಾಡಲಾಗುತ್ತಿದೆ. ಶಿವಮೊಗ್ಗ ವಲಯ ನಂ.1 ಕಚೇರಿ ಆವರಣದಲ್ಲಿರುವ 8 ದ್ವಿಚಕ್ರ ವಾಹನಗಳು ಹಾಗೂ 3 ಆಟೋರಿಕ್ಷಾಗಳನ್ನು ಸೆ. 26 ರಂದು ಹರಾಜು ಹಾಕಲಾಗುತ್ತಿದೆ. ಬೆಳಗ್ಗೆ 11ಕ್ಕೆ ಅಬಕಾರಿ ನಿರೀಕ್ಷಕರ ಕಚೇರಿ, ಶಿವಮೊಗ್ಗ ವಲಯ -01ರ ಆವರಣದಲ್ಲಿ ಯಥಾಸ್ಥಿತಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ನಿಗದಿತ ಸಮಯದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ಈವರೆಗಿನ Top 10 News | 21 ಸೆಪ್ಟೆಂಬರ್ 2023

 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment