ಶ್ರೀಕಾಂತ್‌ ಕಾಂಗ್ರೆಸ್‌ ಸೇರ್ಪಡೆಗೆ ದಿನಾಂಕ ಫಿಕ್ಸ್‌, ದೊಡ್ಡ ಪಟ್ಟಿ ರಿಲೀಸ್‌, ಏನಿದೆ ಅದರಲ್ಲಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 SEPTEMBER 2023

Shivamogga-Live-Number-1-Website

SHIMOGA : ಕಾಂಗ್ರೆಸ್ ಪಕ್ಷ (Congress Party) ಸೇರ್ಪಡೆ ಹೊಸ ನಿರ್ಧಾರವಲ್ಲ. ವರ್ಷದ ಹಿಂದೆಯೆ ತೀರ್ಮಾನಿಸಿದ್ದೆ. ಈಗ ಜೆಡಿಎಸ್‌ ಪಕ್ಷದ ಮುಖಂಡರ ಜೊತೆ ಸೆ.26ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದೇನೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷದ ಹಿಂದೆ ಕಾಂಗ್ರೆಸ್ (Congress Party) ಸೇರ್ಪಡೆ ನಿರ್ಧಾರ ಮಾಡಿದ್ದೆ. ಆದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯಾನಾಯ್ಕ್, ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಗೌಡ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಸಂದರ್ಭ ಪಕ್ಷ ತೊರೆಯುವುದು ಸರಿಯಲ್ಲ ಎಂದು ಎಲ್ಲರು ನಿರ್ಧರಿಸಿದ್ದರು. ಹಾಗಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆವು. ಈಗ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಸಮಯ ಕೂಡಿ ಬಂದಿದೆ ಎಂದರು.

ಜೆಡಿಎಸ್‌ನಲ್ಲಿ ಬಹಳ ಕಷ್ಟ

ಈ ಹಿಂದೆ ಎರಡು ಬಾರಿ ಪಕ್ಷ ತೊರೆಯಲು ನಿರ್ಧರಿಸಿದ್ದೆ. ಆಗ ವರಿಷ್ಠರು ಬೇಡ ಎಂದು ಸೂಚಿಸಿದ್ದರು. ಆದರೆ ಎಷ್ಟೆ ಕಷ್ಟಪಟ್ಟರು ಜನರು ಜೆಡಿಎಸ್‌ ಪಕ್ಷದತ್ತ ಬರುತ್ತಿಲ್ಲ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದತ್ತ ತೆರಳುತ್ತಿದ್ದೇವೆ. ಹಿಂದಿನಿಂದಲು ನಾವು ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡಿದ್ದೇವೆ. ಪಾಲಿಕೆ, ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೆವು. ಈಚೆಗೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದಾಗ ಪಕ್ಷಕ್ಕೆ ಆಹ್ವಾನಿಸಿದ್ದರು. ಜಿಲ್ಲಾ ಜೆಡಿಎಸ್‌ನ ಮುಖಂಡರ ಜೊತೆ ಚರ್ಚೆ ಮಾಡಿ ಈಗ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ ಎಂದು ತಿಳಿಸಿದರು.

-M-Srikanth-to-join-congress-leaving-jds-party

ಇದನ್ನೂ ಓದಿ – ಶಿವಮೊಗ್ಗದಲ್ಲಿ ನಾವಿಕನಿಲ್ಲದ ದೋಣಿಯಾದ ಜೆಡಿಎಸ್‌, ಪಕ್ಷದ ಭವಿಷ್ಯವೇನು?

30ಕ್ಕು ಹೆಚ್ಚು ಮುಖಂಡರ ಪಟ್ಟಿ

ಎಂ.ಶ್ರೀಕಾಂತ್ ಅವರ ಜೊತೆ 30ಕ್ಕು ಹೆಚ್ಚು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಪಾಲಿಕೆ ಸದಸ್ಯ ನಾಗರಾಜ ಕಂಕಾರಿ, ಮಾಜಿ ಮೇಯರ್ ಹೆಚ್.ಪಾಲಾಕ್ಷಿ, ಎಸ್.ಎನ್.ಮಹೇಶ್, ರಾಜಣ್ಣ, ಕೆ‌.ಜಿ.ನವಾಬ್, ಸೈಯದ್ ನುಮಾನ್, ಎಸ್.ಡಿ.ಪ್ರಸನ್ನ ಕುಮಾರ್, ಎಸ್.ಕೆ.ಬಾಸ್ಕರ್, ಶ್ಯಾಮು.ಡಿ, ಮಂಜುನಾಥ ನವುಲೆ ಸೇರಿದಂತೆ 30ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ ಸೇರುತ್ತಿದ್ದಾರೆ. ತಮ್ಮೊಂದಿಗೆ ಕಾಂಗ್ರೆಸ್‌ ಸೇರುತ್ತಿರುವ ಮುಖಂಡರ ಪಟ್ಟಿಯನ್ನು ಎಂ.ಶ್ರೀಕಾಂತ್‌ ಬಿಡುಗಡೆ ಮಾಡಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 24, 2023

ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ಶಿವಮೊಗ್ಗದ ರೆಸಾರ್ಟ್‌ನಲ್ಲಿ ವಿದ್ಯುತ್‌ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಏಪ್ರಿಲ್‌ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ ರೈಲಿಗೆ ಏಪ್ರಿಲ್‌ 8 ರಿಂದ ಅತ್ಯಾಧುನಿಕ LHB ಬೋಗಿಗಳು, ಏನಿದು?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – ಇಂದಿನ ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – ಇಂದಿನ ಅಡಿಕೆ ಧಾರಣೆ

ಶಿವಮೊಗ್ಗದಲ್ಲಿ 250 ಗಾಯಕರನ್ನು ಒಂದೇ ಕಡೆ ಸೇರಿಸುವ ವಿಭಿನ್ನ ಪ್ರಯೋಗ, ಯಾವಾಗ? ಎಲ್ಲಿ?

ಶಿವಮೊಗ್ಗದಲ್ಲಿ 250 ಗಾಯಕರನ್ನು ಒಂದೇ ಕಡೆ ಸೇರಿಸುವ ವಿಭಿನ್ನ ಪ್ರಯೋಗ, ಯಾವಾಗ? ಎಲ್ಲಿ?

ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್‌ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

ಬೆಂಗಳೂರಿನಿಂದ ಶಿವಮೊಗ್ಗದ ಮನೆಗೆ ಮರಳಿದ ಇಂಜಿನಿಯರ್‌ ಕುಟುಂಬ, ಒಳಗೆ ಕಾಲಿಟ್ಟಾಗ ಕಾದಿತ್ತು ಆಘಾತ

ಹೊಸನಗರ ಕ್ಷೇತ್ರಕ್ಕಾಗಿ ಪಾದಯಾತ್ರೆ? ಹೇಗಿತ್ತು ಮೊದಲ ದಿನ? ಯಾರೆಲ್ಲ ಇದ್ದರು?

ಹೊಸನಗರ ಕ್ಷೇತ್ರಕ್ಕಾಗಿ ಪಾದಯಾತ್ರೆ? ಹೇಗಿತ್ತು ಮೊದಲ ದಿನ? ಯಾರೆಲ್ಲ ಇದ್ದರು?

ಭದ್ರಾವತಿಯಲ್ಲಿ 13 ವರ್ಷಗಳ ಬಳಿಕ ಆರೋಪಿ ಪತ್ತೆ, ಏನಿದು ಕೇಸ್?

ಭದ್ರಾವತಿಯಲ್ಲಿ 13 ವರ್ಷಗಳ ಬಳಿಕ ಆರೋಪಿ ಪತ್ತೆ, ಏನಿದು ಕೇಸ್?

ATMನಲ್ಲಿ ಹಣ ಡ್ರಾ ಮಾಡುವಾಗ ಹುಷಾರ್‌, ಅನವಟ್ಟಿಯಲ್ಲಿ ದಾಖಲಾಯ್ತು ಕೇಸ್‌, ಏನಿದು?

ATMನಲ್ಲಿ ಹಣ ಡ್ರಾ ಮಾಡುವಾಗ ಹುಷಾರ್‌, ಅನವಟ್ಟಿಯಲ್ಲಿ ದಾಖಲಾಯ್ತು ಕೇಸ್‌, ಏನಿದು?

ಬೆಳ್ಳೂರು ಸುತ್ತಾಮುತ್ತಾ ಒಂಟಿ ಸಲಗ ಪ್ರತ್ಯಕ್ಷ, ಗ್ರಾಮಸ್ಥರಿಗೆ ಆತಂಕ

ಬೆಳ್ಳೂರು ಸುತ್ತಾಮುತ್ತಾ ಒಂಟಿ ಸಲಗ ಪ್ರತ್ಯಕ್ಷ, ಗ್ರಾಮಸ್ಥರಿಗೆ ಆತಂಕ

ನಗರಸಭೆ ಸಿಬ್ಬಂದಿ ಎಂದು ನಂಬಿಸಿ ₹11.62 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

ನಗರಸಭೆ ಸಿಬ್ಬಂದಿ ಎಂದು ನಂಬಿಸಿ ₹11.62 ಲಕ್ಷದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Leave a Comment