ಇ.ಡಿ. ರೇಡ್‌, ತೀರ್ಥಹಳ್ಳಿಯಲ್ಲಿ ಬೀದಿಗಿಳಿದ ಕಾಂಗ್ರೆಸ್‌, ಯಾರೆಲ್ಲ ಏನೇನು ಆರೋಪ ಮಾಡಿದರು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 6 OCTOBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

THIRTHAHALLI : ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಅವರ ಮನೆಗಳ ಮೇಲೆ ಇ.ಡಿ ದಾಳಿ ಖಂಡಿಸಿ ತೀರ್ಥಹಳ್ಳಿ ತಾಲೂಕು ಕಾಂಗ್ರೆಸ್‌ ಪಕ್ಷದ ವತಿಯಿಂದ ಪ್ರತಿಭಟನಾ ಮೆರವಣಿಗೆ (Protest March) ನಡೆಸಲಾಯಿತು.

ಗಾಂಧಿ ಭವನದಿಂದ ತಾಲೂಕು ಕಚೇರಿವರೆಗೆ ಕಾಂಗ್ರೆಸ್‌ ಪಕ್ಷದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಪಕ್ಷದ ಜಿಲ್ಲಾಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ನೇತೃತ್ವದಲ್ಲಿ ವಹಿಸಿದ್ದರು.

ಯಾರೆಲ್ಲ ಏನೇನು ಹೇಳಿದರು?

ಮಂಜುನಾಥಗೌಡ ಅವರ ವಿರುದ್ಧ ಈಗಾಗಲೆ ತನಿಖೆಯಾಗಿದೆ. ಈಗ ಹೊಸದಾಗಿ ತನಿಖೆ ನಡೆಸಲು ಏನಿದೆ? ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಪಕ್ಷ ಸಂಘಟಿತವಾಗುತ್ತಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರ ಮಂಜುನಾಥಗೌಡ ಅವರಿಗೆ ಹಿಂಸೆ ಕೊಡಲು ಮುಂದಾಗಿದೆ. ಇದಕ್ಕೆ ಸ್ಥಳೀಯ ಶಾಸಕರ ಬೆಂಬಲವು ಇದೆ.ಕಿಮ್ಮನೆ ರತ್ನಾಕರ್‌, ಮಾಜಿ ಸಚಿವ

ಮಂಜುನಾಥ ಗೌಡ ಅವರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ಬಳಿಕ ಸಹಕಾರಿ ಕ್ಷೇತ್ರದಲ್ಲಿರುವವರು ಖುಷಿ ಪಟ್ಟಿದ್ದಾರೆ. ಬಿಜೆಪಿಯವರಿಗೆ ಯಾರ ಬೆಳವಣಿಗೆಯನ್ನೂ ಸಹಿಸಲು ಆಗದು. ಅದರ ಪರಿಣಾಮ ಈ ಇ.ಡಿ ದಾಳಿ.ಹೆಚ್‌.ಎಸ್.ಸುಂದರೇಶ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಪ್ರಮುಖರಾದ ಕಲಗೋಡು ರತ್ನಾಕರ್‌, ವಿಜಯದೇವ್‌, ಮುಡುಬ ರಾಘವೇಂದ್ರ, ಕೆಸ್ತೂರು ಮಂಜುನಾಥ್‌, ಗೀತಾ ರಮೇಶ್‌, ರೆಹಮತುಲ್ಲಾ ಅಸಾದಿ, ಬಂಡಿ ರಾಮಚಂದ್ರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ – ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಮನೆಗಳ ಮೇಲೆ ಇಡಿ ದಾಳಿ, ಶಿವಮೊಗ್ಗದಲ್ಲಿ ಆಕ್ರೋಶ, ಪ್ರತಿಭಟನಾಕರರು ಹೇಳಿದ್ದೇನು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment