ಮೂವರು ಸಜೀವ ದಹನ, ಸ್ಥಳಕ್ಕೆ ಎಂಎಲ್‌ಎ ದೌಡು, ಘಟನೆ ಕುರಿತು ಹೇಳಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 OCTOBER 2023

THIRTHAHALLI : ಕೆಕೋಡು ಕುಟುಂಬದ ಮೂವರು ಸಜೀವ ದಹನ ವಿಚಾರ ತಿಳಿಯುತ್ತಿದ್ದಂತೆ ಶಾಸಕ (MLA) ಆರಗ ಜ್ಞಾನೇಂದ್ರ ಸ್ಥಳಕ್ಕೆ ದೌಡಾಯಿಸಿದರು. ಘಟನೆ ಸಂಭವಿಸಿದ ಮನೆಯಲ್ಲಿ ಪರಿಶೀಲನೆ ನಡೆಸಿದರು. ಅಲ್ಲದೆ ಡಿವೈಎಸ್‌ಪಿ ಗಜಾನನ ವಾಮನ ಸುತಾರ ಅವರಿಂದ ಘಟನೆ ಕುರಿತು ಮಾಹಿತಿ ಪಡೆದರು.

ತುಂಬಾ ಬೇಕಾದ ಕುಟುಂಬ’

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಕೆಕೋಡು ಕುಟುಂಬದವರು ತಮಗೆ ತುಂಬಾ ಬೇಕಾದವರು. ಸುಮಾರು 10 ಎಕರೆ ಅಡಿಕೆ ತೋಟವಿದೆ. ಆರ್ಥಿಕವಾಗಿ ಅನುಕೂಲವಾಗಿದ್ದರು. ಆದರೂ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂವರು ಸುಟ್ಟು ಕರಕಲಾಗಿದ್ದು ಮೃತದೇಹದ ಗುರುತು ಸಿಗದ ಪರಿಸ್ಥಿತಿ ಇದೆ. ಇನ್ನೊಬ್ಬನ ದೇಹ ಶೇ.50ರಷ್ಟು ಸುಟ್ಟ ಗಾಯವಾಗಿದೆ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಪ್ರಚಾರಕರ ಕುಟುಂಬ

ಕೆಕೋಡ ಕುಟುಂಬದ ಪಾ.ರಾ.ಕೃಷ್ಣಮೂರ್ತಿ ಅವರು ಆರ್‌ಎಸ್‌ಎಸ್‌ ಪ್ರಚಾರಕರಾಗಿದ್ದಾರೆ. ದೆಹಲಿಯಲ್ಲಿ ಪ್ರಚಾರಕರಾಗಿದ್ದರು. ಈಗ ಬೆಂಗಳೂರಿನಲ್ಲಿದ್ದಾರೆ. ಸುಮಾರು 35 ವರ್ಷದಿಂದ ಪರಿಚಿತ ಕುಟುಂಬ. ರಾಘವೇಂದ್ರ ಅವರ ಸಹೋದರರೆಲ್ಲ ಹೊರಗಿದ್ದಾರೆ. ಒಬ್ಬರು ವೈದ್ಯರು, ಮತ್ತೊಬ್ಬೂ ದೂರಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಘವೆಂದ್ರ ಅವರ ಪುತ್ರ ದೊಡ್ಡ ಮಟ್ಟದಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದರು ಎಂದರು.

ತಜ್ಞರ ತಂಡ ಬರುತ್ತಿದೆ

ಘಟನೆ ಕುರಿತು ತನಿಖೆ ನಡೆಯುತ್ತಿದೆ. ಎಫ್‌ಎಸ್‌ಎಲ್‌ ಮತ್ತು ತಜ್ಞರ ತಂಡ ಸ್ಥಳಕ್ಕೆ ಆಗಮಿಸುತ್ತಿದೆ. ಪೊಲೀಸರ ತನಿಖೆಯಿಂದಷ್ಟೆ ನಿಖರ ಕಾರಣ ಗೊತ್ತಾಗಲಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಅರ್ಚಕ ಕುಟುಂಬದ ಮೂವರು ಸಜೀವ ದಹನ, ಆಗಿದ್ದೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment