ಹೆಂಡತಿ, ಮಕ್ಕಳನ್ನು ಬಸ್‌ ಹತ್ತಿಸಿ ಕಳುಹಿಸಿದ ಕೆಲವೇ ನಿಮಿಷಕ್ಕೆ ಬಂತು ಫೋನ್‌, ಪತಿಗೆ ಶಾಕ್‌, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 19 OCTOBER 2023

SHIMOGA : ಬಸ್‌ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ (JEWELS) ಕಳ್ಳತನ ಮಾಡಲಾಗಿದೆ.

ಭದ್ರಾವತಿಯ ಪ್ರಭು ಎಂಬುವವರು ತಮ್ಮ ಪತ್ನಿ ಮತ್ತು ಮಕ್ಕಳನ್ನು ದಾವಣಗೆರೆಯಲ್ಲಿರುವ ತಮ್ಮ ಮಾವನ ಮನೆಗೆ ಕಳುಹಿಸಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಮೊದಲು ಬಂದ ಬಸ್‌ ರಶ್‌ ಇದ್ದಿದ್ದರಿಂದ ಮತ್ತೊಂದು ಬಸ್‌ನಲ್ಲಿ ಸೀಟ್‌ ಹಿಡಿದು, ಹತ್ತಿಸಿ ಕಳುಹಿಸಿದ್ದರು. ಬಸ್‌ ನ್ಯೂ ಮಂಡ್ಲಿ ಬಳಿ ತೆರಳುತ್ತಿದ್ದಂತೆ ಪತ್ನಿ ಕರೆ ಮಾಡಿದ್ದು, ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನಾಭರಣ ಕಾಣಿಸುತ್ತಿಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ – ನಡುರಸ್ತೆಯಲ್ಲಿ ಧಗಧಗ ಹೊತ್ತಿ ಉರಿದ ದ್ವಿಚಕ್ರ ವಾಹನ

ತಮ್ಮ ಪತ್ನಿ ಇಬ್ಬರು ಮಕ್ಕಳೊಂದಿಗೆ ಬಸ್‌ ಹತ್ತುವಾಗ ಯಾರೋ ವ್ಯಾನಿಟಿ ಬ್ಯಾಗಿನ ಜಿಪ್‌ ತೆಗೆದು 22 ಗ್ರಾಂ ತೂಕದ ಬಂಗಾರದ ನೆಕ್ಲೇಸ್‌, 11 ಗ್ರಾಂನ ಒಂದು ಜೊತೆ ಬಂಗಾರದ ಜುಮಕಿ ಕಳ್ಳತನ ಮಾಡಿದ್ದಾರೆ. ಇವುಗಳ ಅಂದಾಜು ಮೌಲ್ಯ 1.13 ಲಕ್ಷ ರೂ. ಎಂದು ಪ್ರಭು ದೂರಿನಲ್ಲಿ ಆರೋಪಿಸಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ದಸರಾ ಹಿನ್ನೆಲೆ, ಮೈಸೂರು–ಶಿವಮೊಗ್ಗದ 4 ರೈಲುಗಳಿಗೆ ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ ಸ್ಟಾಪ್‌?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment