ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 OCTOBER 2023
SHIMOGA : ಐರಾವತ ಬಸ್ಸಿನಿಂದ ಇಳಿದು ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಮಹಿಳೆಯೊಬ್ಬರ ಬ್ಯಾಗಿನಲ್ಲಿ (BAG) ಇರಿಸಿದ್ದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (Bus Stand) ಘಟನೆ ಸಂಭವಿಸಿದೆ.
ಕುಂದಾಪುರದ (Kunadapura) ಲಕ್ಷ್ಮಿ ಶೆಣೈ ಎಂಬುವವರ ಬ್ಯಾಗಿನಲ್ಲಿದ್ದ 2.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಚಿನ್ನದ ಬಳೆ, ಚಿನ್ನದ ಹವಳದ ಚೈನ್, ಚಿನ್ನದ ಮುತ್ತಿನ ಸರ ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಇದನ್ನೂ ಓದಿ- ದಸರಾ ರಜೆ, ಪ್ರಯಾಣಿಕರ ಅನುಕೂಲಕ್ಕಾಗಿ KSRTCಯಿಂದ ವಿಶೇಷ ವ್ಯವಸ್ಥೆ
ಹೇಗಾಯ್ತು ಘಟನೆ?
ಸಂಬಂಧಿಯೊಬ್ಬರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಲಕ್ಷ್ಮಿ ಶೆಣೈ ಬೆಂಗಳೂರಿನಿಂದ ಸಾಗರಕ್ಕೆ ಐರಾವತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಅ.16ರಂದು ಬೆಳಗಿನ ಜಾವ 4.10ಕ್ಕೆ ಬಸ್ಸು ಶಿವಮೊಗ್ಗ ನಿಲ್ದಾಣ ತಲುಪಿತ್ತು. ಲಕ್ಷ್ಮಿ ಶೆಣೈ ಬಸ್ ಇಳಿದು ಶೌಚಾಲಯಕ್ಕೆ ಹೋಗಿ ತಮ್ಮ ಸೀಟ್‌ಗೆ ಮರಳಿದ್ದರು. ಬಸ್ಸಿನ ಲಗೇಜ್ ಕ್ಯಾಬಿನ್‌ನಲ್ಲಿ ಅವರ ಬ್ಯಾಗ್ ಇತ್ತು. ಬೆಳಗ್ಗೆ 5.30ಕ್ಕೆ ಬಸ್ಸು ಸಾಗರ ತಲುಪಿತ್ತು. ಅಳಿಯನ ಮನಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಾಣೆಯಾಗಿತ್ತು.
ಶಿವಮೊಗ್ಗ ನಿಲ್ದಾಣದಲ್ಲಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಚಿನ್ನಾಭರಣ ಕಳ್ಳತನ ಆಗಿರಬಹುದು ಎಂದು ಶಂಕಿಸಿ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422