ಶಿವಮೊಗ್ಗ ದಸರಾ, ನಗರದಲ್ಲಿ ಆನೆಗಳ ತಾಲೀಮು ಆರಂಭ

SHIVAMOGGA LIVE NEWS | 21 OCTOBER 2023 (ಈ ಸುದ್ದಿಯನ್ನು ಇನ್ನು 46 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ದಸರಾ ಮಹೋತ್ಸವಕ್ಕೆ ಸಕ್ರೆಬೈಲು ಬಿಡಾರದಿಂದ ಮೂರು ಆನೆಗಳು (Elephants) ನಗರಕ್ಕೆ ಆಗಮಿಸಿವೆ. ಮಹಾನಗರ ಪಾಲಿಕೆ ವತಿಯಿಂದ ಆನೆಗಳಿಗೆ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.

ಅಂಬಾರಿ ಹೊರಲಿರುವ ಸಾಗರ್‌ ಆನೆ, ಕುಮ್ಕಿ ಆನೆಗಳಾದ ನೇತ್ರಾವತಿ ಮತ್ತು ಹೇಮಾವತಿ ನಗರಕ್ಕೆ ಆಗಮಿಸಿವೆ. ಶುಕ್ರವಾರ ಸಂಜೆ ಮಹಾನಗರ ಪಾಲಿಕೆ ಸದಸ್ಯರು ಆನೆಗಳಿಗೆ ಪೂಜೆ ಸಲ್ಲಿಸಿ, ಸ್ವಾಗತಿಸಿದರು. ಕೋಟೆ ರಸ್ತೆಯಲ್ಲಿರುವ ವಾಸವಿ ಶಾಲೆಯಲ್ಲಿ ಆನೆಗಳು ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಇನ್ನು, ಆನೆಗಳು ಬಂದಿರುವ ವಿಚಾರ ತಿಳಿದು ಜನ ವಾಸವಿ ಶಾಲೆಯತ್ತ ಧಾವಿಸುತ್ತಿದ್ದಾರೆ. ಆನೆಗಳ ಫೋಟೊ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ತಾಲೀಮು ಆರಂಭಿಸಿದ ಆನೆಗಳು

ನಗರಕ್ಕೆ ಆಗಮಿಸುತ್ತಿದ್ದಂತೆ ಆನೆಗಳು ತಾಲೀಮು ಆರಂಭಿಸಿವೆ. ಕೋಟೆ ರಸ್ತೆಯಿಂದ ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಆನೆಗಳನ್ನು ಇಂದು ಬೆಳಗ್ಗೆ ಕರೆದೊಯ್ಯಲಾಯಿತು. ನಗರದ ವಾಹನ ದಟ್ಟಣೆ, ಕಟ್ಟಡಗಳು ಮತ್ತು ಇಲ್ಲಿಯ ಪರಿಸರಕ್ಕೆ ಆನೆಗಳು ಹೊಂದಿಕೊಳ್ಳಬೇಕಿದೆ. ಈ ಹಿನ್ನೆಲೆ ತಾಲೀಮು ಪ್ರಮುಖವಾಗುತ್ತದೆ. ಸಕ್ರೆಬೈಲು ಬಿಡಾರದ ಸಿಬ್ಬಂದಿಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ – ಸಕ್ರೆಬೈಲು ಆನೆ ಬಿಡಾರ, ಮಾವುತ, ಕಾವಾಡಿಗಳ ಜೊತೆ ವೈಲ್ಡ್‌ ಟಸ್ಕರ್‌ ದಸರಾ ಸಂಭ್ರಮ

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Sakrebyle-Elephants-at-Durgigudi-Road-in-Shimoga.

Leave a Comment