ಶಂಕರಮಠ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿ ಚಲಿಸುತ್ತಿದ್ದ ಆಟೋ ಪಲ್ಟಿ

SHIVAMOGGA LIVE NEWS | 22 OCTOBER 2023 (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಚಲಿಸುತ್ತಿದ್ದ ಆಟೋಗೆ (Auto) ಕಾರು ಡಿಕ್ಕಿಯಾಗಿ ಒಂದೂವರೆ ವರ್ಷದ ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಶಂಕರಮಠ ರಸ್ತೆಯ ಬಜಾಜ್‌ ಶೋ ರೂಂ ಮುಂಭಾಗ ಘಟನೆ ಸಂಭವಿಸಿದೆ. ಆಟೋ ಚಾಲಕ ವೆಂಕಟೇಶ್‌, ದುರ್ಗಪ್ಪ, ಅವರ ಸಂಬಂಧಿ ಸರಸ್ವತಿ ಮತ್ತು ಒಂದೂವರೆ ವರ್ಷದ ಮಗು ಗಾಯಗೊಂಡಿದ್ದಾರೆ.

ಆಟೋ ವಿದ್ಯಾನಗರದಿಂದ ಬಾಪೂಜಿನಗರ ಕಡೆಗೆ ತೆರಳುತ್ತಿತ್ತು. ಕಾರು ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ರಾಜಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಕಾರು ಚಾಲಕ ನಂತರ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಮಂಜುನಾಥ್‌ ಎಂಬುವವರ ವಿರುದ್ಧ ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – INSTAದಲ್ಲಿ ಯುವತಿ ನಕಲಿ ಖಾತೆ, ಪ್ರಿಯಕರನ ಮೇಲೆ ಶಂಕೆ, FACEBOOKನಲ್ಲಿ ಗೃಹಿಣಿಯ ತೇಜೋವಧೆ

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

ACCIDENT-NEWS-GENERAL-IMAGE.

Leave a Comment