ಗೇಟ್‌ ಕಳ್ಳರು ಅರೆಸ್ಟ್‌, ದೇವಸ್ಥಾನ, ಶಾಲೆಗಳ ಗೇಟ್‌ಗಳನ್ನೇ ಹೊತ್ತೊಯ್ದಿದ್ದರು

SHIVAMOGGA LIVE NEWS | 1 NOVEMBER 2023

ANANDAPURA : ದೇವಸ್ಥಾನ, ಶಾಲೆಗಳ ಗೇಟ್‌ (gate), ಅಂಗಡಿಯೊಂದರ ರೋಲಿಂಗ್‌ ಶೆಟರ್‌ ಕಳ್ಳತನ ಮಾಡಿದ್ದ ಆರೋಪಿಗಳನ್ನು ಆನಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Gate-theft-case-two-arrest-by-Anandapura-police

ಕಣ್ಣೂರು ದೇವಾಲಯ, ಹೆಬ್ಬೋಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೆಪಿಎಸ್‌ ಶಾಲೆಯ ಗೇಟ್‌ಗಳ ಕಳ್ಳತನ ಮಾಡಲಾಗಿತ್ತು. ಅಂಗಡಿಯೊಂದರ ರೋಲಿಂಗ್‌ ಶೆಟರ್‌ ಕಳುವಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಕಬ್ಬಿಣ ಮಾರಾಟ ಮಾಡಿದ ಸುಳಿವಿನ ಆಧಾರದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Kalleshwara-Enterprises.webp

ಇದನ್ನೂ ಓದಿ- ಶಿವಮೊಗ್ಗದ ಕಾರ್‌ ಶೋ ರೂಂಗೆ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ, ಕಾರಣವೇನು?

ಸುದರ್ಶನ್‌ (21) ಮತ್ತು ಸುದರ್ಶನ್‌ (22) ಬಂಧಿತರು. ಆರೋಪಿಗಳಿಂದ 25 ಸಾವಿರ ರೂ. ಮೌಲ್ಯದ ಕಬ್ಬಿಣ, ಒಂದು ಬೈಕ್‌ ವಶಕ್ಕೆ ಪಡೆಯಲಾಗಿದೆ. ಪಿಎಸ್‌ಐ ಯುವರಾಜ್‌ ಕಂಬಳಿ, ನಿರ್ಮಲಾ, ದಿವಾಕರ್‌ ನಾಯಕ್‌, ಮಾಳಿಂಗ ರಾಯ್‌, ಸಂತೋಷ್‌ ನಾಯ್ಕ, ಅವಿನಾಶ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment