ಸಿಗಂದೂರು ದೇವಿಗೆ ಕನ್ನಡ ಧ್ವಜದ ಅಲಂಕಾರ, ನಾಡು, ನುಡಿಗಾಗಿ ವಿಶೇಷ ಪೂಜೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 NOVEMBER 2023

SHIMOGA : ರಾಜ್ಯೋತ್ಸವದ ಹಿನ್ನೆಲೆ ಸಿಗಂದೂರು (Sigandur) ಶ್ರೀ ಚೌಡೇಶ್ವರಿ ದೇವಿಗೆ ನಾಡ ಧ್ವಜದ ಅಲಂಕಾರ ಮಾಡಲಾಗಿತ್ತು. ದೇಗುಲಕ್ಕೆ ಬಂದಿದ್ದ ಭಕ್ತರು ವಿಶೇಷ ಅಲಂಕಾರ ಕಣ್ತುಂಬಿಕೊಂಡು ಖುಷಿಪಟ್ಟರು.

 ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ನಾವೆಲ್ಲಾ ಶ್ರಮಿಸಬೇಕು. ಹೆತ್ತ ತಾಯಿ ಅಷ್ಟೇ ಜನ್ಮ ನೀಡಿದ ನಾಡು ಕೂಡ ಶ್ರೇಷ್ಟ. ಕಲಿಯೋಕೆ ಕೋಟಿ ಭಾಷೆಯಾದರೂ ಆಡೋಕೆ ಒಂದೇ ಭಾಷೆ ಅದು ಕನ್ನಡ.ಡಾ. ರಾಮಪ್ಪ, ಸಿಗಂದೂರಿನ ಅನುವಂಶಿಕ ಧರ್ಮದರ್ಶಿ

ವಿಶೇಷ ಅಲಂಕಾರ ನೆರವೇರಿಸಿ ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಹೆಚ್‌.ಆರ್.ರವಿಕುಮಾರ್‌, ವ್ಯವಸ್ಥಾಪಕ ಪ್ರಕಾಶ್‌ ಭಂಡಾರಿ, ದೇಗುಲದ ಸಿಬ್ಬಂದಿ ಮತ್ತು ಭಕ್ತರು ಇದ್ದರು.

ಇದನ್ನೂ ಓದಿ- ಕರ್ನಾಟಕ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಘ ಅಂದ್ರೆ ಬಸ್‌ ಸ್ಟಾಪ್‌ ಹೆಸರಲ್ಲ, ಇಲ್ಲಿದೆ 7 ಪ್ರಮುಖ ವಿಷಯ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 1, 2023

Leave a Comment