SHIVAMOGGA LIVE NEWS | 3 NOVEMBER 2023
SHIMOGA : 2023-24 ನೇ ಸಾಲಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನ (Scholarship) ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ಆನ್‍ಲೈನ್ ಅರ್ಜಿಗಳನ್ನು ಸಲಿಸಲು 2023ರ ನವೆಂಬರ್ 31 ಕೊನೆ ದಿನ. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 6 ಲಕ್ಷ ರೂ. ಒಳಗಿದ್ದಲ್ಲಿ ಎರಡು ವರ್ಷಗಳ ಕೋರ್ಸ್‍ಗೆ ಗರಿಷ್ಟ 20 ಲಕ್ಷ ರೂ. ಮಿತಿಯಲ್ಲಿ ವಿದ್ಯಾರ್ಥಿ ವೇತನ ಭರಿಸಲಾಗುವುದು (ಒಂದು ವರ್ಷಕ್ಕೆ 10 ಲಕ್ಷ ರೂ. ನಂತೆ). ಪೋಷಕರ ವಾರ್ಷಿಕ ಆದಾಯವು ರೂ.6 ಲಕ್ಷದಿಂದ ರೂ.15 ಲಕ್ಷಗಳ ಒಳಗಿದ್ದಲ್ಲಿ ಎರಡು ವರ್ಷಗಳ ಕೋರ್ಸ್‍ಗೆ 10 ಲಕ್ಷ ರೂ. ಗರಿಷ್ಟ ಮಿತಿಯಲ್ಲಿ ವಿದ್ಯಾರ್ಥಿ ವೇತನ ಪಾವತಿಸುವುದು (ಒಂದು ವರ್ಷಕ್ಕೆ 5 ಲಕ್ಷ ರೂ.ಗಳಂತೆ).
ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೇಡ್, 5ನೇ ಪ್ಯಾರಲಲ್ ರಸ್ತೆ, ದುರ್ಗಿಗುಡಿ, ಶಿವಮೊಗ್ಗ ದೂ.ಸಂ: 08182-220206 https://dom.karnataka.gov.in/shimoga/public ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ – SHIMOGA JOBS | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ, ಸ್ಟಾರ್ ಏರ್‌ನಿಂದ ನೇರ ಸಂದರ್ಶನ, ಯಾವಾಗ? ಎಲ್ಲಿ?