ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 NOVEMBER 2023
SHIMOGA : ರೈಲ್ವೆ ನಿಲ್ದಾಣ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಎರಡು ಬಾಕ್ಸ್ (Box) ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ. ಬಾಂಬ್ ಶೋಧ ದಳ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ರೈಲ್ವೆ ನಿಲ್ದಾಣ ಪಾರ್ಕಿಂಗ್ ಸ್ಥಳದ ಸಮೀಪ ಎರಡು ಬಾಕ್ಸ್ ಪತ್ತೆಯಾಗಿವೆ. ಗೋಣಿ ಚೀಲದಲ್ಲಿ ಬಾಕ್ಸ್‌ಗಳನ್ನು ಸುತ್ತಲಾಗಿದೆ. ಅನಾಥವಾಗಿ ಇದ್ದ ಬಾಕ್ಸ್ ಗಮನಿಸಿದ ಆಟೋ ಚಾಲಕರು ಗಮನಿಸಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಾಂಬ್ ಪತ್ತೆ ದಳ, ಶ್ವಾನ ದಳ
ವಿಷಯ ತಿಳಿಯುತ್ತಿದ್ದಂತೆ ಬಾಂಬ್ ಪತ್ತೆ ದಳ, ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದವು. ಬಾಕ್ಸ್ ಸಮೀಪ ಸಾರ್ವಜನಿಕರು ಹೋಗದಂತೆ ತಡೆಯಲು ಬ್ಯಾರಿಕೇಡ್ ಹಾಕಲಾಗಿದೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಂಜೆ ಬೆಂಗಳೂರಿಂದ ತಂಡ
ಇನ್ನು, ಬಾಕ್ಸ್‌ನಲ್ಲಿ ಪರಿಶೀಲನೆಗೆ ಬೆಂಗಳೂರಿನಿಂದ ವಿಶೇಷ ತಂಡ ಆಗಮಿಸಬೇಕಿದೆ. ಈ ಹಿನ್ನಲೆ ವಿಶೇಷ ತಂಡ ಆಗಮಿಸುವವರೆಗೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ – ಮೀಟಿಂಗ್‌ನಿಂದ ಮನೆಗೆ ಮರಳಿದಾಗ ಕಾಣೆಯಾಗಿದ್ದಳು ಸ್ನೇಹಿತೆ, ದೇವರ ಮನೆ ಪರಿಶೀಲಿಸಿದಾಗ ಕಾದಿತ್ತು ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422