ಶಿವಮೊಗ್ಗದಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಸ್ಕೆಚ್‌, ರಾಡ್‌, ಲಾಂಗ್‌, ಖಾರದ ಪುಡಿ ಸಹಿತ ಸಿಕ್ಕಿಬಿತ್ತು ಗ್ಯಾಂಗ್

SHIVAMOGGA LIVE NEWS | 14 NOVEMBER 2023‌ (ಈ ಸುದ್ದಿಯನ್ನು ಇನ್ನು 47 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ದರೋಡೆಗೆ ಹೊಂಚು ಹಾಕಿದ್ದವರನ್ನು ಬಂಧಿಸಿರುವ ದೊಡ್ಡಪೇಟೆ ಪೊಲೀಸರು, ಸ್ಟೀಲ್ ಡ್ರ್ಯಾಗರ್, ಕಬ್ಬಿಣದ ರಾಡು ಹಾಗೂ ಲಾಂಗ್ ಅನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಒಬ್ಬ ಪರಾರಿಯಾಗಿದ್ದಾನೆ.

ಕೋಟೆಗಂಗೂರಿನ ಸಾಗರ್ ಅಲಿಯಾಸ್ ಶಬರೀಶ್ (22), ರಾಗಿಗುಡ್ಡದ ಶೇಯಸ್ (22), ಭದ್ರಾವತಿ ತಾಲೂಕಿನ ಬಾಬಳ್ಳಿಯ ದೇವರಾಜ್‌ (31), ಭದ್ರಾವತಿ ಎಪಿಎಂಸಿಯ ಅಡಕೆ ಮಂಡಿ ಕೆಲಸಗಾರ ನಾಗರಾಜ್ ಅಲಿಯಾಸ್ ಕುಮಾರ್ (38) ಬಂಧಿತರು. ಕೋಟೆಗಂಗೂರಿನ ಸಂತೋಷ್ ಪರಾರಿಯಾಗಿದ್ದಾನೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ನಗರದ ಎನ್‌ಟಿ ರಸ್ತೆಯ ಫಲಕ್ ಶಾದಿ ಮಹಲ್‌ ಪಕ್ಕದ ಖಾಲಿ ಜಾಗಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿ ಈ ಗ್ಯಾಂಗ್‌ ದರೋಡೆಗೆ ಹೊಂಚು ಹಾಕಿತ್ತು. ರಸ್ತೆಯಲ್ಲಿ ಓಡಾಡುವ ಜನರು ಮತ್ತು ವಾಹನಗಳನ್ನು ತಡೆದು ಅವರ ಬಳಿ ಇರುವ ನಗದು, ಚಿನ್ನಾಭರಣ ಕಿತ್ತುಕೊಳ್ಳಲು ಹೊಂಚು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ವಸಂತ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಬ್ಬಿಣದ ರಾಡು, ಮಚ್ಚು, 50 ಗ್ರಾಂ ತೂಕದ ಖಾರದ ಪುಡಿ, ಸ್ಟೀಲ್ ಡ್ಯಾಗರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ – ಗಾಜನೂರಿನಲ್ಲಿ ಕಿಂಗ್‌ ಫಿಶರ್‌ ಬಿಯರ್‌ಗಾಗಿ ಮದ್ಯದಂಗಡಿ ಬಾಗಿಲು ಮುರಿದ ಕಳ್ಳರು

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Four-arrested-in-Shimoga-for-dacoity-attempt.

Leave a Comment