ಶಿವಮೊಗ್ಗ ಎಂಬ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಗೊತ್ತಿರಬೇಕಾದ 2 ಸಂಗತಿ | ನಮ್ಮೂರು ಶಿವಮೊಗ್ಗ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS

NAMMURU SHIVAMOGGA | ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ಶಿವಮೊಗ್ಗ ಪ್ರಮುಖ ಜಿಲ್ಲೆಯಾಗಿದೆ. ಅದೆ ರೀತಿ ಜಿಲ್ಲೆಗೆ ಶಿವಮೊಗ್ಗ ಎಂಬ ಹೆಸರು ಬಂದದ್ದು ಹೇಗೆ ಎಂಬುದಕ್ಕೂ ಪ್ರಮುಖ ವಾದಗಳಿವೆ. ಶಾಸನಗಳಲ್ಲಿಯು ವಿವರಣೆಗಳಿವೆ ಎನ್ನುತ್ತಾರೆ ಇತಿಹಾಸಕಾರರು.

ಶಿವಮೊಗ್ಗ ಎಂಬ ಹೆಸರು ಬಂದಿದ್ದು ಹೇಗೆ?

ಹೆಸರಿನ ಮೂಲ 1 : ಪರಮಾತ್ಮ ಶಿವನಿಂದಾಗಿ ಶಿವಮೊಗ್ಗ ಎಂಬ ಹೆಸರು ಬಂತು ಎಂದು ಮೂರು ಉಲ್ಲೇಖ ನೀಡಲಾಗುತ್ತದೆ. ಈ ಮೂರರ ಪೈಕಿ ಯಾವುದು ಸರಿ ಅನ್ನುವುದು ಎಲ್ಲಿಯು ಸ್ಪಷ್ಟವಿಲ್ಲ. ಶಿವನ ಮುಖ, ಶಿವನ ಮೂಗು, ಶಿವನ ಮೊಗ್ಗೆ (ಶಿವನಿಗಾಗಿ ಮೀಸಲಿಟ್ಟ ಹೂವಿನ ಮೊಗ್ಗು). ಈ ಹೆಸರುಗಳು ಕಾಲಾಂತರದಲ್ಲಿ ಶಿವಮೊಗ್ಗ ಆಗಿರಬಹುದು ಎಂದು ಹೇಳಲಾಗುತ್ತದೆ. ಇನ್ನು, ಈ ಭಾಗದಲ್ಲಿ ಶಿವನ ದೇಗುಲಗಳು ಹೆಚ್ಚಿರುವುದು ಈ ವಾದಕ್ಕೆ ಪುಷ್ಟಿ ನೀಡುತ್ತವೆ.

ಹೆಸರಿನ ಮೂಲ 2 : ಇದು ದೂರ್ವಾಸ ಕ್ಷೇತ್ರ ಎಂಬ ಪ್ರತೀತಿ ಇದೆ. ಇಲ್ಲಿ ದೂರ್ವಾಸ ಮುನಿ ತಪಸ್ಸು ಮಾಡಿದ್ದರು. ಸಿಹಿಯಾದ ಗರಿಯಕೆಯ ರಸವನ್ನು ತಮ್ಮ ಮೊಗೆಯಲ್ಲಿ (ಕಮಂಡಲು) ಇರಿಸಿಕೊಳ್ಳುತ್ತಿದ್ದರು. 1079ರ ತಟ್ಟಿಕೆರೆ ಶಾಸನದಲ್ಲಿ ಈ ಬಗ್ಗೆ ಉಲ್ಲೇಖವಿದೆ ಅನ್ನುತ್ತಾರೆ ಇತಿಹಾಸಕಾರರು. ದನಗಾಹಿಗಳು ಕದ್ದು ಮೊಗೆಯಲ್ಲಿದ್ದ ಸಿಹಿ ರಸದ ಸವಿ ಕಂಡಿದ್ದರಂತೆ. ಹಾಗಾಗಿ ಸಿಹಿ ಮತ್ತು ಮೊಗೆ ಸೇರಿ ಶಿವಮೊಗ್ಗ ಎಂಬ ಹೆಸರು ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಶಿವ ಮುಖ, ಶಿವನ ಮೊಗ್ಗು, ಸಿಹಿ ಮೊಗೆ ಇವೆಲ್ಲ ಕಾಲಾಂತರದಲ್ಲಿ ಕನ್ನಡದಲ್ಲಿ ಶಿವಮೊಗ್ಗೆಯಾಗಿತ್ತು. ಕೊನೆಗೆ ಆಂಗ್ಲಮಯವಾಗಿ ಶಿವಮೊಗ್ಗ ಆಗಿರಬಹುದು. ಈಗ ಶಿವಮೊಗ್ಗ ಎಂದರೆ ರಾಜ್ಯದ ಅತ್ಯಂತ ಪ್ರಮುಖ ಜಿಲ್ಲೆ. ಎಲ್ಲ ಕ್ಷೇತ್ರದಲ್ಲಿಯು ಪ್ರಖ್ಯಾತವಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment