ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 18 NOVEMBER 2023
SHIMOGA : ಸೋಗಾನೆಯ ವಿಮಾನ ನಿಲ್ದಾಣದಿಂದ ನ.21 ರಿಂದ ಸ್ಟಾರ್ ಏರ್ (Star Air) ವಿಮಾನ ಸೇವೆ ಆರಂಭಿಸುತ್ತಿದೆ. ಇದಕ್ಕೆ ಪೂರಕ ಸಿದ್ಧತೆ ನಡೆಯುತ್ತಿದ್ದು ಸ್ಟಾರ್ ಏರ್‌ನ ಬಸ್ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಲಾರಿಯಲ್ಲಿ ಬಂತು ಬಸ್
ಸ್ಟಾರ್ ಏರ್ ತನ್ನ ಸಂಸ್ಥೆಯ ಬಸ್ಸನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಳುಹಿಸಿದೆ. ಟರ್ಮಿನಲ್‌ನಿಂದ ವಿಮಾನ ಹತ್ತುವ ಸ್ಥಳ ಏಪ್ರಾನ್‌ಗೆ ಪ್ರಯಾಣಿಕರನ್ನು ಕರೆದೊಯ್ಯಲು ಮತ್ತು ಅಲ್ಲಿಂದ ಟರ್ಮಿನಲ್‌ಗೆ ಕರೆತರಲು ಈ ಬಸ್ಸು ಬಳಕೆಯಾಗುತ್ತದೆ. ಲಾರಿಯ ಮೂಲಕ ಬಸ್ ಅನ್ನು ವಿಮಾನ ನಿಲ್ದಾಣಕ್ಕೆ ತರಲಾಗಿದೆ.
ಬಿರುಸುಗೊಂಡ ಸಿದ್ಧತೆ
ಸ್ಟಾರ್ ಏರ್ (Star Air) ಸಂಸ್ಥೆ ಶಿವಮೊಗ್ಗದಿಂದ ವಿಮಾನಯಾನ ಸೇವೆ ಆರಂಭಿಸಲು ಸಿದ್ಧತೆ ಬಿರುಸುಗೊಂಡಿದೆ. ವಿಮಾನ ನಿಲ್ದಾಣದಲ್ಲಿ ಕಸ್ಟಮರ್ ಸರ್ವಿಸ್ ಮತ್ತು ಸೆಕ್ಯೂರಿಟಿಗಾಗಿ ಈಚೆಗೆ ನೇಮಕಾತಿ ನಡೆಸಲಾಗಿತ್ತು. ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೌಂಟರ್ ಕೂಡ ಆರಂಭವಾಗಿದೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಬೃಹತ್ ಸ್ವದೇಶಿ ಮೇಳ, ಮಳಿಗೆಗೆ ಬುಕ್ಕಿಂಗ್ ಆರಂಭ, ಯಾವಾಗ ನಡೆಯುತ್ತೆ ಮೇಳ?
ಮೂರು ಮಾರ್ಗದಲ್ಲಿ ವಿಮಾನಯಾನ
ಸ್ಟಾರ್ ಏರ್ ಶಿವಮೊಗ್ಗದಿಂದ ಮೂರು ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಲಿದೆ. ಶಿವಮೊಗ್ಗದಿಂದ ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ಸಂಪರ್ಕ ಕಲ್ಪಿಸಲಿದೆ. ನ.21ರಿಂದ ವಿಮಾನಯಾನ ಸೇವೆ ಆರಂಭವಾಗಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ಬಿರುಸುಗೊಂಡಿದೆ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






