ರಾತ್ರಿ 12 ಗಂಟೆಗೆ ಮುಗಿಯಿತು ಶಿವಮೊಗ್ಗ ಪಾಲಿಕೆ ಅಧಿಕಾರವಧಿ, ಇವತ್ತಿನಿಂದ ಎಲ್ಲ ಸದಸ್ಯರು ಮಾಜಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 NOVEMBER 2023

SHIMOGA : ಮಹಾನಗರ ಪಾಲಿಕೆ (Mahanagara palike) ಅಧಿಕಾರ ಅವಧಿ ಪೂರ್ಣಗೊಂಡಿದೆ. ಇವತ್ತಿನಿಂದ ಪಾಲಿಕೆ ಆಯುಕ್ತರು ಆಡಳಿತಾಧಿಕಾರಿಯಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಸದಸ್ಯರ ಗ್ರೂಪ್‌ ಫೋಟೊ

ಪಾಲಿಕೆ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನೆಲೆ ಪಾಲಿಕೆ ಸದಸ್ಯರು ಸೋಮವಾರ ಗ್ರೂಪ್‌ ಫೋಟೊಗೆ ಪೋಸ್‌ ಕೊಟ್ಟರು. ಶಾಸಕ ಎಸ್‌.ಎನ್.ಚನ್ನಬಸಪ್ಪ, ಮೇಯರ್‌ ಶಿವಕುಮಾರ್‌, ಕಮಿಷನರ್‌ ಮಾಯಣ್ಣಗೌಡ ಸೇರಿದಂತೆ ಎಲ್ಲ ವಾರ್ಡ್‌ಗಳ ಪಾಲಿಕೆ ಸದಸ್ಯರು ಫೋಟೊ ಸೆಷನ್‌ನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ- ಶಿವಮೊಗ್ಗ ಜೆಡಿಎಸ್‌ ಪಕ್ಷಕ್ಕೆ ನೂತನ ಅಧ್ಯಕ್ಷ, ಕಾರ್ಯಕರ್ತರ ಸಮ್ಮುಖ ಅಧಿಕಾರ ಸ್ವೀಕಾರ

ಮಾಜಿಗಳಿಗೆ ಎರಡು ಕೊಠಡಿ

ಇನ್ನೊಂದೆಡೆ, ಮಾಜಿಗಳಾದರು ಸದಸ್ಯರು ವಾರ್ಡ್‌ ಕೆಲಸಕ್ಕೆ ಪಾಲಿಕೆಗೆ ಬಂದಾಗ ಸಾರ್ವಜನಿಕರೊಂದಿಗೆ ಚರ್ಚಿಸಲು ಎರಡು ಕೊಠಡಿಗಳನ್ನು ಮೀಸಲಿರಿಸಲಾಗಿದೆ. ಸೋಮವಾರ ನಡೆದ ಪಾಲಿಕೆ ತುರ್ತು ಸಭೆಯಲ್ಲಿ ಬಿಜೆಪಿ ಸದಸ್ಯರಿಗೊಂದು, ಕಾಂಗ್ರೆಸ್‌ ಸದಸ್ಯರಿಗೊಂದು ಕೊಠಡಿ ಮೀಸಲಿಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 28, 2023

Leave a Comment