ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ : ಒಳ ಮೀಸಲು ಜಾರಿ ಮಾಡದೆ ರಾಜ್ಯ ಸರ್ಕಾರ ಯಾವುದೆ ಬ್ಯಾಕ್ ಲಾಗ್ (Backlog) ಹುದ್ದೆಗಳನ್ನು ಭರ್ತಿ ಮಾಡಬಾರದು. ಹಾಗೆಯೇ ಬಡ್ತಿಯನ್ನು ನೀಡಬಾರದು ಎಂದು ಆದಿ ಜಾಂಬವ ಸಂಘದ ಪ್ರಮುಖ ಬಿ.ಆರ್.ಭಾಸ್ಕರ್ ಪ್ರಸಾದ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ರಾತ್ರಿ ಖಾಲಿ ಬಿಂದಿಗೆ, ಬಕೆಟ್ ಹಿಡಿದು ಬೀದಿಗಿಳಿದ ಮಹಿಳೆಯರು, ಮಕ್ಕಳು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಆರ್.ಭಾಸ್ಕರ್ ಪ್ರಸಾದ್, ವಿವಿಧ ಇಲಾಖೆಗಳಲ್ಲಿನ ಬ್ಯಾಕ್ ಲಾಗ್ (Backlog) ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಮಹಾದೇವಪ್ಪ ಮುಂದಾಗಿದ್ದಾರೆ. ಒಳ ಮೀಸಲು ಜಾರಿಯಾಗದೆ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು ಎಂದು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದೇವೆ ಎಂದರು.
ಈಗ ಬಡ್ತಿ ನೀಡಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಿಂದ ನಮ್ಮ ಸಮುದಾಯಕ್ಕೆ ಕೆಳ ಹಂತದ ಹುದ್ದೆಗಳು ಮಾತ್ರೆ ದೊರೆಯಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯ ಹೈಲೈಟ್ ಪಾಯಿಂಟ್ಸ್
ಸುದ್ದಿಗೋಷ್ಠಿಯಲ್ಲಿ ಬಿ.ಆರ್.ಭಾಸ್ಕರ್ ಪ್ರಸಾದ್ ಏನೆಲ್ಲ ಮಾತನಾಡಿದರು. ಅದರ ಹೈಲೈಟ್ ಪಾಯಿಂಟ್ಸ್ ಇಲ್ಲಿದೆ.
- ಒಳ ಮೀಸಲಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ಕ್ರಾಂತಿಕಾರಿ ರಥಯಾತ್ರೆ ಕೈಗೊಂಡಿದ್ದೇವೆ. ಜೂ.9ರಂದು ಬೆಂಗಳೂರಿನಲ್ಲಿ ಸಮಾರೋಪ ನಡೆಯಲಿದೆ.
- ಮನೆ ಮನೆ ಸಮೀಕ್ಷ ನಡೆಸಬೇಕು ಎಂದು ನ್ಯಾ. ನಾಗಮೋಹನ್ ದಾಸ್ ಆಯೋಗ ಮಧ್ಯಂತರ ವರದಿ ನೀಡಿದೆ. ಈತನಕ ಮನೆ ಮನೆ ಸಮೀಕ್ಷೆ ಆರಂಭವಾಗಿಲ್ಲ.
- ಸಮಾಜ ಕಲ್ಯಾಣ ಇಲಾಖೆ ಬಡ್ತಿ ನೇಮಕ ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ. ಸಚಿವ ಹೆಚ್.ಸಿ.ಮಹಾದೇವಪ್ಪ ಮನೆ ಎದುರು ಧರಣಿ ನಡೆಸಿ, ಘೆರಾವ್ ಹಾಕಲಾಗುವುದು.
ಹೊಸಮನೆಯಲ್ಲಿ ಜಾಗೃತಿ ಸಭೆ
ಶಿವಮೊಗ್ಗದ ಹೊಸಮನೆ ಬಡಾವಣೆಯ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಾಗೃತಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಬಿ.ಆರ್.ಭಾಸ್ಕರ್ ಪ್ರಸಾದ್, ಮನೆ ಮನೆ ಗಣತಿ ವೇಳೆ ಮಾದಿಗ ಎಂದೇ ಬರೆಸಬೇಕು ಎಂದು ಸೂಚಿಸಿದರು.

ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸೇವಾ ಸಮಿತಿ ಅಧ್ಯಕ್ಷ ಸತೀಶ್.ಕೆ, ಉಪಾಧ್ಯಕ್ಷರಾದ ರಾಮ್ ಕುಮಾರ್ ಆರ್, ಜಿಲ್ಲಾ ಆದಿಜಾಂಬವ ಸಂಘದ ಅಧ್ಯಕ್ಷ ಎ.ಕೆ.ಅಣ್ಣಪ್ಪ, ಮುಖಂಡರಾದ ಶಿವಲಿಂಗಪ್ಪ, ಒಳಮೀಸಲಾತಿ ಹೋರಾಟಗಾರ ಪ್ರಭುರಾಜ್, ಸುರೇಶ್ ಮಳಲಿಯಪ್ಪ, ಕೆಪಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ನೌಕರ ಸಂಘದ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಹೆಚ್.ಆರ್.ಮಲ್ಲಿಕಾರ್ಜುನ ಸ್ವಾಮಿ ಸೇರಿ ಹಲವರು ಇದ್ದರು.








