ನಕಲಿ ಫೇಸ್ಬುಕ್ನಲ್ಲಿ ಯುವತಿ ಫೋಟೊ ದುರ್ಬಳಕೆ

SHIMOGA : ಫೇಸ್ಬುಕ್ನಲ್ಲಿ ಯುವಕನೊಬ್ಬನ ಹೆಸರಿನಲ್ಲಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಆತನ ಸಹೋದರಿಯ ಫೋಟೊ ಅಪ್ಲೋಡ್ ಮಾಡಿ, ಅಶ್ಲೀಲ ಬರಹ ಮತ್ತು ಯಾರೊ ಅಶ್ಲೀಲವಾಗಿ ಮಾತನಾಡಿರುವ ಆಡಿಯೋ ಪ್ರಕಟಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಸಿ ಮತ್ತು 66 ಡಿ ಅಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದಲ್ಲಿ ಆರೋಪಿಗೆ ಸೆಕ್ಷನ್ 66ಸಿ ಅಡಿ ಮೂರು ವರ್ಷ ಜೈಲು ಮತ್ತು ಒಂದು ಲಕ್ಷ ರೂ.ವರೆಗೆ ದಂಡ ಮತ್ತು 66 ಡಿ ಅಡಿ ಮೂರು ವರ್ಷ ಜೈಲು, ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.
ಇದನ್ನೂ ಓದಿ- ಬೆಂಗಳೂರಿನಿಂದ ಸೋಮಿನಕೊಪ್ಪದ ಮನೆಗೆ ಮರಳಿದ ಮಹಿಳೆ ಕಾದಿತ್ತು ಆಘಾತ
ಯುವತಿಯ ಫೋಟೊ ಎಡಿಟ್ ಮಾಡಿ ಅಪ್ಲೋಡ್
SHIMOGA : ಇನ್ಸ್ಟಾಗ್ರಾಂನಿಂದ ಯುವತಿಯೊಬ್ಬಳ ಫೋಟವನ್ನು ಕದ್ದು ನಕಲಿ ಫೇಸ್ಬುಕ್ ಮತ್ತು ಟೆಲಿಗ್ರಾಂ ಅಕೌಂಟ್ ಕ್ರಿಯೇಟ್ ಮಾಡಿ ಅಪ್ಲೋಡ್ ಮಾಡಲಾಗಿದೆ. ಅಲ್ಲದೆ ಯುವತಿಯ ಪರಿಚಿತರು ಮತ್ತು ಕುಟುಂಬದವರಿಗೆ ಫೋಟೊ ಕಳುಹಿಸುವುದಾಗಿ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಸಿ, 66ಡಿ ಮತ್ತು 67 ಅಡಿ ಪ್ರಕರಣ ದಾಖಲಾಗಿದೆ. ಐಟಿ ಕಾಯ್ದೆ ಸೆಕ್ಷನ್ 67 ಅಡಿ ಆರೋಪ ಸಾಬೀತಾದಲ್ಲಿ ಮೂರು ವರ್ಷ ಜೈಲು ಮತ್ತು ಐದು ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ.