ಮುಷ್ಕರ ಮುಗಿಸಿ ಮನೆಗೆ ಮರಳಿದ ಅಂಗನವಾಡಿ ಕಾರ್ಯಕರ್ತೆಗೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 DECEMBER 2023

SHIMOGA : ಬೆಂಗಳೂರಿನಲ್ಲಿ ಮುಷ್ಕರಕ್ಕೆ ತೆರಳಿದ್ದಾಗ ಲಕ್ಕಿನಕೊಪ್ಪದಲ್ಲಿನ ಅಂಗನವಾಡಿ ಕಾರ್ಯಕರ್ತೆಯ ಮನೆಯಲ್ಲಿ ಚಿನ್ನಾಭರಣ(Jewellery) ಕಳ್ಳತನವಾಗಿದೆ. 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಬೀರುವಿನ ಲಾಕರ್‌ನಲ್ಲಿದ್ದ ಚಿನ್ನಾಭರಣ

ಅಂಗನವಾಡಿ ಕಾರ್ಯಕರ್ತೆ ರೇಣುಕಮ್ಮ ಅವರ ಮನೆಯ ಬೀರುವಿನ ಲಾಕರ್‌ನಲ್ಲಿದ್ದ ಚಿನ್ನದ ಉಂಗುರು, ಜುಮ್ಕಿ, ಚೈನ್‌, ಕಿವಿ ಸುತ್ತು ಕಳ್ಳತನವಾಗಿದೆ. ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ (Jewellery) ಮತ್ತು 40 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ- ಈಗಿನ ಹೋಬಳಿಗಳು ಆಗ ತಾಲೂಕುಗಳಾಗಿದ್ದವು, ಆಗಿನ ಹೋಬಳಿಗಳು ಈಗ ತಾಲೂಕುಗಳಾಗಿವೆ – ನಮ್ಮೂರು ಶಿವಮೊಗ್ಗ

ಮುಷ್ಕರಕ್ಕೆ ತಾಯಿ, ಮನೆಯಲ್ಲಿದ್ದ ಮಗ

ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರಕ್ಕೆ ರೇಣುಕಮ್ಮ ಬೆಂಗಳೂರಿಗೆ ತೆರಳಿದ್ದರು. ಮನೆಯಲ್ಲಿ  ಮಗ ಒಬ್ಬನೆ ಇದ್ದ. ಮುಷ್ಕರದಿಂದ ಹಿಂತಿರುಗಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಮಗನನ್ನು ವಿಚಾರಿಸಿದಾಗ ಮನೆಯ ಬಾಗಿಲಿನ ಚಿಲಕ ಮಾತ್ರ ಹಾಕಿ ಹೊರಗೆ ಹೋಗುತ್ತಿದ್ದೆ ಎಂದು ತಿಳಿಸಿದ್ದಾನೆ. ಈ ಹಿನ್ನೆಲೆ ಚಿನ್ನಾಭರಣ, ನಗದು ಕದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೇಣುಕಮ್ಮ ದೂರಿನಲ್ಲಿ ತಿಳಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment