ಶಿವಮೊಗ್ಗದಲ್ಲಿ ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿ, ದಾವಣಗೆರೆ, ಚಿತ್ರದುರ್ಗ ರೈತರಿಗು ಇದೆ ಅವಕಾಶ

SHIVAMOGGA LIVE NEWS | 1 DECEMBER 2023 (ಈ ಸುದ್ದಿಯನ್ನು ಇನ್ನು 40 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್) ರೈತರಿಂದ (farmers) ನೇರವಾಗಿ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್‌ಗೆ 2,250 ರೂ.ನಂತೆ ಖರೀದಿಸಲಿದೆ. ರೈತರು ಸಮೀಪದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಒಂದು ಕೆಜಿಯಷ್ಟು ಮೆಕ್ಕೆಜೋಳದ ಮಾದರಿ ನೀಡಿ ಫ್ರೂಟ್ಸ್ ತಂತ್ರಾಂಶದ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

141123-Mekke-Jola-Jowar.webp

ಇದನ್ನೂ ಓದಿ- ಕೆರೆಗೆ ನುಗ್ಗಿ ಅರ್ಧ ಮುಳುಗಿದ ಕಾರು, ಅದೃಷ್ಟವಶಾತ್‌ ದಂಪತಿ, ಮಗಳು ಪಾರು, ಹೇಗಾಯ್ತು ಘಟನೆ?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ರೈತರಿಗೆ ಸಾಗಣೆ ವೆಚ್ಚದ ಹೊರೆ ತಗ್ಗಿಸಲು ಮಹಾಮಂಡಳವು ಎರಡೂ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದಿದೆ. ರೈತರು (farmers) ಮೆಕ್ಕೆಜೋಳದ ಮಾದರಿಯನ್ನು ದಾವಣಗೆರೆ ಡೇರಿ ಅಥವಾ ಚಿತ್ರದುರ್ಗ ಶೀತಲೀಕರಣ ಕೇಂದ್ರಕ್ಕೆ ನೀಡಬಹುದು. ಒಬ್ಬ ರೈತರಿಂದ ಗರಿಷ್ಠ 1 ಸಾವಿರ ಕ್ವಿಂಟಾಲ್‌ ಮೆಕ್ಕೆಜೋಳ ಸರಬರಾಜಿಗೆ ಸೀಮಿತಗೊಳಿಸಿದೆ. ಮಾಹಿತಿಗೆ ದಾವಣಗೆರೆ ಜಿಲ್ಲಾ ವ್ಯವಸ್ಥಾಪಕ (7760980540), ಚಿತ್ರದುರ್ಗ ಜಿಲ್ಲೆಯ ಉಪ ವ್ಯವಸ್ಥಾಪಕ (8971435116) ಅವರನ್ನು ಸಂಪರ್ಕಿಸಬಹುದು.

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment