ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 1 DECEMBER 2023
SHIMOGA : ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ‘ನಿಲ್ದಾಣ ಮಹೋತ್ಸವ’ ಆಚರಿಸಲಾಯಿತು. ಶಿವಮೊಗ್ಗದಿಂದ ಮೊದಲ ಪ್ಯಾಸೆಂಜರ್ ರೈಲು ಸಂಚರಿಸಿದ ದಿನವನ್ನು ಸ್ಮರಿಸುವ ಸಲುವಾಗಿ ನೈಋತ್ಯ ರೈಲ್ವೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂನಲ್ಲಿ ಶಾಲಾ ಮಕ್ಕಳು ನೃತ್ಯ ಪ್ರದರ್ಶನ ಮಾಡಿದರು. ಬಳಿಕ ರೈಲ್ವೆ ಇಲಾಖೆ ಅಧಿಕಾರಿಗಳು ಮಕ್ಕಳಿಂದ ಕೇಕ್ ಕತ್ತರಿಸಿ ಮೊದಲ ರೈಲು ಸಂಚಾರಿಸಿದ ದಿನವನ್ನು ಸ್ಮರಿಸಿದರು.
ಮೊದಲ ರೈಲು ಸಂಚರಿಸಿದ ದಿನ
1899ರ ಡಿಸೆಂಬರ್ 1ರಂದು ಶಿವಮೊಗ್ಗದಲ್ಲಿ ರೈಲ್ವೆ ಸೇವೆ ಆರಂಭವಾಯಿತು. ಶಿವಮೊಗ್ಗ – ಬೀರೂರು ಮಧ್ಯೆ 37.92 ಮೈಲಿ ದೂರದ ಮೀಟರ್ ಗೇಜ್ ರೈಲು ಮಾರ್ಗದಲ್ಲಿ ಮೊದಲ ಪ್ಯಾಸೆಂಜರ್ ರೈಲು ಸಂಚರಿಸಿತು. ಮೈಸೂರು ರಾಜರು ಶಿವಮೊಗ್ಗ – ಬೀರೂರು ನಡುವೆ ಮೀಟರ್ ಗೇಜ್ ರೈಲು ಸೇವೆ ಆರಂಭಿಸಿದರು. ಇದು ಈ ಭಾಗದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದೆ.
ಇದನ್ನೂ ಓದಿ – ಶಿವಮೊಗ್ಗ TO ಮೈಸೂರು 4 ರೈಲುಗಳಿವೆ, ಯಾವ್ಯಾವ ಟೈಮ್‌ಗೆ ಎಲ್ಲಿಂದ ಹೊರಡುತ್ತವೆ? ಎಷ್ಟೊತ್ತಿಗೆ ತಲುಪುತ್ತವೆ?
ರೈಲ್ವೆ ಇತಿಹಾಸ ಮತ್ತು ನಿಲ್ದಾಣದ ಮಹತ್ವವನ್ನು ಪ್ರಯಾಣಿಕರಿಗೆ ತಿಳಿಸುವ ಸಲುವಾಗಿ ನೈಋತ್ಯ ರೈಲ್ವೆ ವತಿಯಿಂದ ನಿಲ್ದಾಣ ಮಹೋತ್ಸವ ಆಚರಿಸಲಾಯಿತು.
ಇದನ್ನೂ ಓದಿ – ಶಿವಮೊಗ್ಗದಿಂದ ಬೆಂಗಳೂರು ರೈಲು ಟೈಮಿಂಗ್, ಎಷ್ಟು ರೈಲುಗಳಿವೆ? ಟೈಮಿಂಗ್ ಏನೇನು?


LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು
















