ಭದ್ರಾವತಿಯಲ್ಲಿ ರೈಲು ಹತ್ತಿದ ಮಹಿಳೆಗೆ ಶಿವಮೊಗ್ಗದಲ್ಲಿ ಕಾದಿತ್ತು ಶಾಕ್‌, ರೈಲ್ವೆ ಪೊಲೀಸರಿಂದಾಗಿ ಸದ್ಯ ನಿರಾಳ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 2 DECEMBER 2023

SHIMOGA : ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಬ್ಯಾಗ್‌ ಅನ್ನು ರೈಲ್ವೆ ಪೊಲೀಸರು ಸುರಕ್ಷಿತವಾಗಿ ವಾರಸುದಾರರಿಗೆ ತಲುಪಿಸಿದ್ದಾರೆ. ಬ್ಯಾಗ್‌ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವಿತ್ತು. ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.

ಘಟನೆ ಸಂಭವಿಸಿದ್ದು ಹೇಗೆ?

ಸ್ಫೂರ್ತಿ ಎಂಬುವವರು ಇವತ್ತು ಭದ್ರಾವತಿಯ ತಮ್ಮ ಮನೆಯಿಂದ ಸಾಗರದಲ್ಲಿರುವ ತವರು ಮನೆಗೆ ತೆರಳುತ್ತಿದ್ದರು. ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ತಾಳಗುಪ್ಪ ಇಂಟರ್‌ಸಿಟಿ ರೈಲು ಹತ್ತಿದ್ದರು. ಶಿವಮೊಗ್ಗ ತಲುಪುವ ಹೊತ್ತಿಗೆ ಬ್ಯಾಗ್‌ ಕಾಣೆಯಾಗಿರುವುದು ಗೊತ್ತಾಗಿದೆ. ಕೂಡಲೆ ಶಿವಮೊಗ್ಗ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೂಡಲೆ ಭದ್ರಾವತಿ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಲಾಯಿತು. ನಿಲ್ದಾಣದಲ್ಲಿ ಬ್ಯಾಗ್‌ ಪತ್ತೆ ಹಚ್ಚಿದ ಭದ್ರಾವತಿ ರೈಲ್ವೆ ಪೊಲೀಸರು ಅದನ್ನು ಶಿವಮೊಗ್ಗಕ್ಕೆ ತಲುಪಿಸಿದರು.

Shimoga Bhadravathi Railway police gold bag returned to woman

ಬ್ಯಾಗ್‌ನಲ್ಲಿತ್ತು ಲಕ್ಷ ಲಕ್ಷದ ಚಿನ್ನಾಭರಣ

ಸ್ಪೂರ್ತಿಯವರ ಬ್ಯಾಗ್‌ನಲ್ಲಿ ಬಂಗಾರದ ಚೈನ್‌, ನೆಕ್ಲೇಸ್‌, ಬಳೆಗಳು ಇದ್ದವು. ಇವುಗಳ ಮೌಲ್ಯ 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ‘ರೈಲು ಹತ್ತುವ ಸಂದರ್ಭ 9 ಲಕ್ಷ ರೂ. ಮೌಲ್ಯದ ಒಡವೆ ಇದ್ದ ಬ್ಯಾಗ್‌ ಮರೆತಿದ್ದೆ. ರೈಲ್ವೆ ಪೊಲೀಸರು ಸುರಕ್ಷಿತವಾಗಿ ನನ್ನ ಬ್ಯಾಗ್‌ ಮತ್ತು ಒಡವೆಗಳನ್ನು ಒಪ್ಪಿಸಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆʼ ಎಂದು ಸ್ಪೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಿಂದ ಬೆಂಗಳೂರು ರೈಲು ಟೈಮಿಂಗ್‌, ಎಷ್ಟು ರೈಲುಗಳಿವೆ? ಟೈಮಿಂಗ್‌ ಏನೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 2, 2023

Leave a Comment