ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 DECEMBER 2023
SHIMOGA : ರೈಲ್ವೆ ಲೆವೆಲ್ ಕ್ರಾಸಿಂಗ್ನಲ್ಲಿ ತಾಂತ್ರಿಕ ನಿರ್ವಹಣೆ ಹಿನ್ನೆಲೆ ಶಿವಮೊಗ್ಗ – ಭದ್ರಾವತಿ ನಡುವೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಡಿ.5 ರಿಂದ 7ರವರೆಗೆ ಈ ಮಾರ್ಗದಲ್ಲಿ ವಾಹನಗಳಿಗೆ ಪರ್ಯಾಯ ಮಾರ್ಗ (temporary route) ಸೂಚಿಸಲಾಗಿದೆ.
ಶಿವಮೊಗ್ಗದಿಂದ ಭದ್ರಾವತಿ ಮತ್ತು ಭದ್ರಾವತಿಯಿಂದ ಶಿವಮೊಗ್ಗಕ್ಕೆ ತೆರಳುವ ಕಾರು, ಟ್ಯಾಕ್ಸಿ ಹಾಗೂ ಇತರೆ ನಾಲ್ಕು ಚಕ್ರದ ವಾಹನಗಳು ಬಿಳಕಿ ಕ್ರಾಸ್ – ಲಕ್ಷ್ಮೀಪುರ – ಹೆಬ್ಬಂಡಿ – ವಿದ್ಯಾಧಿರಾಜ ಕಲ್ಯಾಣ ಮಂಟಪ – ಐಟಿಐ ಮಾರ್ಗವಾಗಿ ಭದ್ರಾವತಿ ಬಸ್ ನಿಲ್ದಾಣದ ಮಾರ್ಗದಲ್ಲಿ ಸಂಚರಿಸಬಹುದು.
ಕೆಎಸ್ಆರ್ಟಿಸಿ ಬಸ್, ಲಾರಿ, ಗೂಡ್ಸ್ ವಾಹನಗಳು ಅಂಡರ್ ಬ್ರಿಡ್ಜ್ – ಉಂಬ್ಳೆಬೈಲು ರಸ್ತೆ – ಕೃಷ್ಣಪ್ಪ ಸರ್ಕಲ್ ತಲುಪಿ ರಾಷ್ಟ್ರೀಯ ಹೆದ್ದಾರಿ 69ರ ಮೂಲಕ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅದೇಶಿಸಿದ್ದಾರೆ.
ಇದನ್ನೂ ಓದಿ – ಹೊಂಬುಜದಲ್ಲಿ ದೇವಿಗೆ ಚಿನ್ನದ ಸೀರೆ ಅರ್ಪಣೆ, ಲಕ್ಷ ದೀಪೋತ್ಸವ, ಹೇಗಿತ್ತು ವೈಭವ? ಹೇಗಿದೆ ಸೀರೆ?

LATEST NEWS
- ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್, ಏನೇನೆಲ್ಲ ಸ್ಟಾಲ್ಗಳಿವೆ?

- ಸರ್ಕಾರಿ ಅಧಿಕಾರಿಗೆ ಜೈಲು ಶಿಕ್ಷೆ, ಏನಿದು ಪ್ರಕರಣ?

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? – ಇಂದಿನ ಅಡಿಕೆ ಧಾರಣೆ

- ಹೊಟೇಲ್ ಮಾಲೀಕನಿಂದ ಕೊಲೆ, ಕಾರಿನಲ್ಲಿ ಮೃತದೇಹ ಸಾಗಿಸುವಾಗ ಪೊಲೀಸ್ ಬಲೆಗೆ

- Acting Registrar Appointed for Kuvempu University

About The Editor
ನಿತಿನ್ ಆರ್.ಕೈದೊಟ್ಲು
















