SHIVAMOGGA LIVE NEWS | 6 DECEMBER 2023 ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
SHIMOGA : ನಗರದ ಬಿ.ಹೆಚ್. ರಸ್ತೆಯಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಗ್ನಿ ಶಾಮಕ ದಳದಿಂದ (Fire department) ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಶಿಬಿರ ನಡೆಸಲಾಯಿತು. ಸಂದರ್ಭದಲ್ಲಿ ಅಗ್ನಿಶಾಮಕ ದಳದ ಠಾಣಾಧಿಕಾರಿ ವಸಂತಕುಮಾರ್ ಮಕ್ಕಳಿಗೆ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ನೀಡಿದರು.

ಅಗ್ನಿ ಅವಘಡಗಳ ಮಾದರಿಗಳು ಮತ್ತು ಯಾವೆಲ್ಲ ಸಂದರ್ಭ ಯಾವೆಲ್ಲ ಸುರಕ್ಷಿತ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಲಾಯಿತು. ಪ್ರೊಬೇಷನರಿ ಅಗ್ನಿಶಾಮಕ (Fire department) ಅಧಿಕಾರಿ ಶಫೀಕ್ ತಹಶೀಲ್ದಾರ್, ಪ್ರಾಂಶುಪಾಲ ಜಯಂತ್ ಎಸ್. ಆಡಳಿತ ಮಂಡಳಿ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ, ಉಪನ್ಯಾಸಕರು, ಅಗ್ನಿಶಾಮಕ ದಳ ಸಿಬ್ಬಂದಿ ಇದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ, ಚಿಂಗಾರಿಗೆ ಜೀವಾವಧಿ ಶಿಕ್ಷೆ, ಏನಿದು ಪ್ರಕರಣ?