ದಿನ ಭವಿಷ್ಯ | ಯಾವ ರಾಶಿಗೆ ಇವತ್ತು ಹೇಗಿದೆ? ಇಲ್ಲಿದೆ 12 ರಾಶಿಗಳ ದಿನದ ಭವಿಷ್ಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 DECEMBER 2023

ಮೇಷ

ಉದ್ಯೋಗ ಸ್ಥಳದಲ್ಲಿ ಇತರರ ಸಹಾಯ ಪಡೆದು ಕೆಲಸ ಮಾಡಿ. ಕಡಿಮೆ ಸಮಯದಲ್ಲಿ ಕೆಲಸ ಮುಗಿಯಲಿದೆ. ಉತ್ತಮ ಹೆಸರು ಸಂಪಾದನೆ. ಕುಲದೇವರ ದರ್ಶನ ಪಡೆಯುವ ಮನಸ್ಸಾಗಬಹುದು.

ವೃಷಭ

ಕೆಲಸದ ಸ್ಥಳದಲ್ಲಿ ಎದುರಾಗುವ ಹಲವು ಪ್ರಶ್ನೆಗಳಿಗೆ ಚಾಣಕ್ಷತೆಯ ಉತ್ತರ ನೀಡುತ್ತೀರಿ. ಸಸ್ಯ ಶಾಸ್ತ್ರಜ್ಞರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಸೂಕ್ತ.

ಮಿಥುನ

ಕಚ್ಚಾ ತೈಲದ ವಹಿವಾಟು ಮಾಡುವವರಿಗೆ ಸವಾಲು ಎದುರಾಗುತ್ತದೆ. ಬಂಗಾರದ ಬೆಲೆಯ ಏರಿಳಿತದಿಂದ ನಿಮ್ಮ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ.

ಕರ್ಕಾಟಕ

ಹರಿತ ಮಾತಿಗೆ ಕಡಿವಾಣ ಹಾಕಿ. ನಿಮ್ಮ ಮಾತಿನಿಂದ ಕೆಲವರ ತೇಜೋವಧೆ ಸಾಧ್ಯತೆ. ಕುಟುಂಬದವರ ದೂರ ಪ್ರಯಾಣ. ಆತಂಕಕ್ಕೆ ಕಾರಣವಾಗಲಿದೆ.

ಸಿಂಹ

ಕೆಲಸದ ಆರಂಭಕ್ಕು ಮೊದಲು ತಪ್ಪದೆ ಪ್ರಾರ್ಥನೆ ಮಾಡಿ. ಬಂದೊದಗುವ ವಿಘ್ನಗಳು ನಿವಾರಣೆ ಆಗಲಿದೆ. ಅಮಾಯಕರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ.

ಕನ್ಯಾ

ಅನಿರೀಕ್ಷಿತವಾಗಿ ಮನೆಗೆ ಭೇಟಿ ನೀಡುವುದರಿಂದ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ಚರ್ಮ ಸಂಬಂಧಿ ತೊಂದರೆ ಸಾಧ್ಯತೆ.

ತುಲಾ

ಸಭೆ, ಸಮಾರಂಭಗಳಲ್ಲಿ ಮನ್ನಣೆ ದೊರೆಯಲಿದೆ. ದಲ್ಲಾಳಿಗಳ ಆಮಿಷಕ್ಕೆ ಮರುಳಾಗದಿರಿ. ಪುಷ್ಪವಿನ್ಯಾಸಕರಿಗೆ ಪ್ರಸಿದ್ಧಿ ಪಡೆಯುವ ಸಾಧ್ಯತೆ.

ವೃಶ್ಚಿಕ

ಏಕಾಂಗಿತನ ಕಾಡಲಿದೆ. ಮನೆಯಲ್ಲಿ ಮಕ್ಕಳ ಆಟೋಟ ಗಮನಿಸಿ ಮನಸ್ಸು ಪ್ರಫುಲ್ಲವಾಗಲಿದೆ. ಬೇರೆಯವರು ಪಡುವ ಕಷ್ಟಕ್ಕೆ ಮಿಡಿಯುವಿರಿ.

ಧನು

ಹಳೆಯ ತಪ್ಪು ಮರುಕಳಿಸಲಿದೆ. ಮರ್ಯಾದೆಯ ಪ್ರಶ್ನೆ ಎದುರಾಗುತ್ತದೆ. ಕೆಲಸದ ಸ್ಥಳದಲ್ಲಿನ ಕೋಪವನ್ನು ಮನೆಯ ಮಂದಿ ಮೇಲೆ ಪ್ರಯೋಗಿಸಬೇಡಿ.

ಮಕರ

ಆಪ್ತರ ದುಂದುವೆಚ್ಚದ ಕುರಿತು ಅಸಮಾಧಾನ. ಹಣ ಹೂಡಿಕೆ ವಿಚಾರದಲ್ಲಿ ಎಚ್ಚರ ಅಗತ್ಯ. ಕಂತುಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ.

ಕುಂಭ

ವಿದ್ಯುತ್‌ ಉಪಕರಣ ಬಳಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಮನೆ ಮಂದಿಯಿಂದ ನೆಮ್ಮದಿ.

ಮೀನ

ಸ್ನೇಹಿತರಿಂದ ಸಹಾಯ ಲಭಿಸಲಿದೆ. ನೆರವು ನೀಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಅಗತ್ಯ. ಸಾಮಾಜಿಕ ಸ್ಥಾನಮಾನ ಹೆಚ್ಚಳ.

ಇದನ್ನೂ ಓದಿ – ಅಡಿಕೆ ಧಾರಣೆ | 7 ಡಿಸೆಂಬರ್‌ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 8, 2023

Leave a Comment