ಶಿವಮೊಗ್ಗದ ಸ್ವದೇಶಿ ಮೇಳದಲ್ಲಿ ಕೋಟಿ ಕೋಟಿ ವಹಿವಾಟು, ಲಕ್ಷಾಂತರ ಜನ ಭಾಗಿ, ಎಷ್ಟಾಗಿದೆ ವ್ಯಾಪಾರ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 11 DECEMBER 2023

SHIMOGA : ನಗರದಲ್ಲಿ ಆಯೋಜಿಸಿದ್ದ ಸ್ವದೇಶಿ ಮೇಳಕ್ಕೆ ತೆರೆ ಬಿದ್ದಿದೆ. ಕಳೆದ ಐದು ದಿನದಲ್ಲಿ ಅಂದಾಜು 7.68 ಕೋಟಿ ರೂ. ವಹಿವಾಟು ನಡೆದಿದೆ. 3.75 ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ವೀಕೆಂಡ್‌ನಲ್ಲಿ ಜನವೋ ಜನ

ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಐದು ದಿನದಿಂದ ಸ್ವದೇಶಿ ಮೇಳ ಆಯೋಜಿಸಲಾಗಿತ್ತು. ಸುಮಾರು 200 ಮಳಿಗೆಗಳು ಇದ್ದವು. ಮೊದಲ ದಿನದಿಂದಲೆ ಮೇಳಕ್ಕೆ ಉತ್ತಮ ಸ್ಪಂದನೆ ಲಭಿಸಿತ್ತು. ವೀಕೆಂಡ್‌ ಸಂದರ್ಭ ದೊಡ್ಡ ಸಂಖ್ಯೆಯ ಜನರು ಮೇಳದಲ್ಲಿ ಪಾಲ್ಗೊಂಡರು.

ಮೇಳಕ್ಕಾಗಿ ಮೂರು ತಿಂಗಳು ನಿರಂತರ ಸಂಘಟನೆ ಮಾಡಲಾಗಿದೆ. ಇದರ ಪರಿಣಾಮ ಮೇಳದಲ್ಲಿ 7.68 ಕೋಟಿ ರೂ. ವಹಿವಾಟು ನಡೆದಿದೆ. 3.75 ಲಕ್ಷ ಜನರು ಸ್ವದೇಶಿ ಮೇಳದಲ್ಲಿ ಪಾಲ್ಗೊಂಡಿದ್ದಾರೆ.ಹರ್ಷ ಕಾಮತ್‌, ಸಂಘಟಕ

Swadeshi Mela in Shimoga Freedom Park

ಸ್ವದೇಶಿ ಮೇಳಕ್ಕೆ ತೆರೆ

ಐದು ದಿನದ ಸ್ವದೇಶಿ ಮೇಳಕ್ಕೆ ಭಾನುವಾರ ತೆರೆ ಬಿದ್ದಿದೆ. ಫ್ರೀಡಂ ಪಾರ್ಕ್‌ನಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.

ವಿದೇಶಿ ವಸ್ತುಗಳಿಂದ ಸ್ಥಳೀಯ ಉದ್ಯಮಿಗಳನ್ನು ಕಷ್ಟಕ್ಕೆ ದೂಡಿದಂತಾಗುತ್ತದೆ. ಆದ್ದರಿಂದ ಒಂದೊಂದೆ ಸ್ವದೇಶಿ ಉತ್ಪನ್ನ ಬಳಕೆ ಮಾಡಲು ಆರಂಭಿಸಿದರೆ ವಿದೇಶಿ ವಸ್ತುಗಳನ್ನು ದೂರ ಸರಿಸಬಹುದು. ನಿತ್ಯ ಬಳಕೆ ವಸ್ತುಗಳಿಂದಲೆ ಈ ಪ್ರಯತ್ನ ಶುರು ಮಾಡಬೇಕಿದೆ.ಅನ್ನದಾಶಂಕರ ಪಾಣಿಗ್ರಾಹಿ, ಅಖಿಲ ಭಾರತ ಸಂಘರ್ಷ ವಾಹಿನಿ

Swadeshi Mela in Shimoga Freedom Park

ಭಾರತದಲ್ಲಿ ಸಿದ್ಧವಾದ ವಸ್ತುಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. ಸ್ಥಳೀಯರು ಸ್ಥಳೀಯವಾಗಿ ತಯಾರಾದ ಉತ್ಪನ್ನಗಳಿಗೆ ಬೆಲೆ ನೀಡಬೇಕು.ವಿನಯ ಗುರೂಜಿ, ಗೌರಿಗದ್ದೆ

ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್.ಅರುಣ್‌, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ಪ್ರಮುಖರಾದ ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ – ಜನ ಶತಾಬ್ದಿ, ಇಂಟರ್‌ಸಿಟಿ ವಿರುದ್ಧ ದೂರು, ಬಳಕೆದಾರರ ಸಭೆಯಲ್ಲಿ ಏನೇನೆಲ್ಲ ಚರ್ಚೆಯಾಯ್ತು? ಇಲ್ಲಿದೆ 7 ಪಾಯಿಂಟ್‌

Leave a Comment