ಶಿವಮೊಗ್ಗ ಸಿಟಿ ಬಸ್ಸಿನಲ್ಲಿ ಮೊಬೈಲ್‌ ಬಳಸಿದ ಚಾಲಕ, ಫೋಟೊ ತೆಗೆದ ಪ್ರಯಾಣಿಕ, ಮುಂದೇನಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 DECEMBER 2023

SHIMOGA : ಮೊಬೈಲ್‌ನಲ್ಲಿ ಮಾತನಾಡುತ್ತ ಡ್ರೈವಿಂಗ್‌ ಮಾಡುತ್ತಿದ್ದ ಸಿಟಿ ಬಸ್‌ ಚಾಲಕನೊಬ್ಬನಿಗೆ ಸಂಚಾರ ಠಾಣೆ ಪೊಲೀಸರು 5 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪ್ರಯಾಣಿಕರೊಬ್ಬರು ಫೋಟೊ ತೆಗೆದು ಟ್ರಾಫಿಕ್‌ ಪೊಲೀಸರಿಗೆ ರವಾನಿಸಿದ್ದರು. ಅದನ್ನು ಪರಿಶೀಲಿಸಿದ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌, ಸಿಟಿ ಬಸ್‌ ಚಾಲಕ ಚೇತನ್‌ನನ್ನು ಪತ್ತೆ ಹಚ್ಚಿ ಮೋಟರ್‌ ವೆಹಿಕಲ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಡಿ.23ರಂದು ಶಿವಮೊಗ್ಗ ಸಿಟಿ ಬಸ್‌ನ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತ ಡ್ರೈವಿಂಗ್ ಮಾಡುತ್ತಿದ್ದ. ಹಿಂದಿನ ಸೀಟಿನಲ್ಲಿ ಕುಳಿತ ಪ್ರಯಾಣಿಕರೊಬ್ಬರು ಫೋಟೊ ತೆಗೆದು ಪೊಲೀಸರಿಗೆ ಕಳುಹಿಸಿದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಉದ್ಘಾಟನೆಯಾಗುತ್ತೆ 5ನೇ ಗ್ಯಾರಂಟಿ ಯೋಜನೆ‌, ಕಾರ್ಯಕ್ರಮಕ್ಕೆ ಸಿಎಂ ಭೇಟಿ, ದಿನಾಂಕ, ಸ್ಥಳ ಫಿಕ್ಸ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment