ಕೋಟೆ ಠಾಣೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ, ಚಂಡಿಕಾದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಹೋಮ, ವಿಶೇಷ ಪೂಜೆ

SHIVAMOGGA LIVE NEWS | 26 DECEMBER 2023

SHIMOGA : ನಗರದ ಗ್ರಾಮ ದೇವತೆ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಬ್ರಹ್ಮರಥೋತ್ಸವ ನಡೆಯಿತು. ಇದಕ್ಕೂ ಮೊದಲು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕೋಟೆ ಪೊಲೀಸ್‌ ಠಾಣೆ ರಸ್ತೆಯಲ್ಲಿ ಬ್ರಹ್ಮರಥೋತ್ಸವ ನಡೆಯಿತು. ದೇಗುಲದ ಭಕ್ತರು ರಥೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಚಿಕ್ಕ ರಥ ರಾಜಬೀದಿ ಉತ್ಸವ ನಡೆಯಿತು. ನಗರದ ವಿವಿಧೆಡೆ ದೇವಿಯನ್ನು ಚಿಕ್ಕ ರಥದಲ್ಲಿ ಮೆರವಣಿಗೆ ನಡೆಸಲಾಯಿತು.

ವಿವಿಧ ಧಾರ್ಮಿಕ ಕಾರ್ಯಕ್ರಮ

Kalleshwara-Enterprises.webp

ಬ್ರಹ್ಮರಥೋತ್ಸವ ಅಂಗವಾಗಿ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಮಹಾಗಣಪತಿ ಪೂಜೆ, ಕಲಶ ಸ್ಥಾಪನೆ, ಚಂಡಿಕಾಪಾರಾಯಣ, ದುರ್ಗ ಜಪ, ಮೂಲ ಅಮ್ಮನವರಿಗೆ ವಿಶೇಷ ಪೂಜೆ, ರಾಕ್ಷೋಘ್ನ ಹೋಮ, ಅಘೋರಾಸ್ತ್ರ, ಪ್ರತ್ಯಂಗಿರಾ ಹೋಮ ನೆರವೇರಿಸಲಾಗಿದೆ.

ಬ್ರಹ್ಮರಥೋತ್ಸವದ ಬಳಿಕ ಸಾಮೂಹಿಕ ದುರ್ಗಾ ಲಕ್ಷ ಕುಂಕುಮಾರ್ಚನೆ, ಭಜನೆ, ಅಷ್ಠಾವಧನ ಸೇವೆ ನಡೆಯಲಿದೆ. ಬುಧವಾರ ತುಂಗಾ ನದಿಯಲ್ಲಿ ಗಂಗೆ ಪೂಜೆ, ದೇಗುಲದಲ್ಲಿ ದುರ್ಗಾಹೋಮ, ಕುಂಭಾಭಿಷೇಕ, ಮಹಾಪೂಜೆ ನಡೆಯಲಿದೆ.

Kote Chandikadurga Parameshwari temple Shimoga

ಇದನ್ನೂ ಓದಿ – ಮಹಿಳೆಯರಿಗೆ ಗುಡ್‌ ನ್ಯೂಸ್‌, ಗ್ರಾಮ ಪಂಚಾಯಿತಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಕ್ಯಾಂಪ್‌, ಯಾವಾಗ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment