ನಿವೃತ್ತ ಯೋಧರಿಗೆ ಅದ್ಧೂರಿ ಸ್ವಾಗತ, ಆನಂದಪುರ, ರಿಪ್ಪನ್‌ಪೇಟೆಯಲ್ಲಿ ಮೆರವಣಿಗೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 JANUARY 2023

ANANDAPURA : ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಹಿಂತಿರುಗಿದ ಯೋಧ ಸುಬೇದಾರ್ ಎಂ.ಗಣಪತಿ ಅವರಿಗೆ ನಾಗರಿಕರು ಭವ್ಯ ಸ್ವಾಗತ ನೀಡಿದರು. ಯಡೇಹಳ್ಳಿಯಿಂದ ಹಿರೇಹಾರಕ ಗ್ರಾಮದವರೆಗೆ ಮೆರವಣಿಗೆ ನಡೆಸಲಾಯಿತು.

ಸೇನೆಯಲ್ಲಿ ಸುದೀರ್ಘ 28 ವರ್ಷ ಸೇವೆ ಸಲ್ಲಿಸಿರುವ ಗಣಪತಿ ಅವರು ನಿವೃತ್ತರಾಗಿ ತವರಿಗೆ ಮರಳಿದ್ದಾರೆ. ಪಂಜಾಬ್‌, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ನಾಗಲ್ಯಾಂ ಸೇರಿದಂತೆ ವಿವಿಧೆಡೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡಿದ್ದಾರೆ.

ಮಾಜಿ ಸೈನಿಕರಾದ ದಿನೇಶ್, ಚಂದ್ರಪ್ಪ ಮಣಕೊಂದೂರು, ಕಿಶೋರ್ ಬೈರಾಪುರ, ಡಾಕಪ್ಪ, ಸುಭಾಶ್ ಕೌತಳ್ಳಿ, ಪ್ರಮುಖರಾದ ದಿವಾಕರ್, ಚೌಡಪ್ಪ, ಪ್ರದೀಪ್ ಇದ್ದರು.

ರಿಪ್ಪನ್‌ಪೇಟೆಯಲ್ಲೂ ಅದ್ಧೂರಿ ಮೆರವಣಿಗೆ

28 ವರ್ಷ ಸೇವೆ ಸಲ್ಲಿಸಿ ಸೇನೆಯಿಂದ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ ಸುಬೇದಾರ್‌ ಮುಕುಂದ ಬಿ.ಎಂ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಅರಸಾಳು ರೈಲ್ವೆ ನಿಲ್ದಾಣದಲ್ಲಿ ಸುಬೇದಾರ್‌ ಮುಕುಂದ ಅವರನ್ನು ಸ್ವಾಗತಿಸಿ, ಮನೆವರೆಗೆ ಮೆರವಣಿಗೆ ನಡೆಸಲಾಯಿತು. ವಿವಿಧ ಸಂಘ ಸಂಸ್ಥೆಗಳು, ಜುಮ್ಮಾ ಮಸೀದಿಯ ಪ್ರಮುಖರು ನಿವೃತ್ತ ಯೋಧನಿಗೆ ಸನ್ಮಾನಿಸಿದರು.

1995ರಲ್ಲಿ ಸೇನೆಗೆ ಸೇರ್ಪಡೆಯಾದ ಅವರು ಹೈದರಾಬಾದಿನಲ್ಲಿ ತರಬೇತಿ ಮುಗಿಸಿ, ಜಮ್ಮು ಮತ್ತು ಕಾಶ್ಮೀರ, ಗುಜರಾತ್ ರಾಜ್ಯಗಳಲ್ಲಿ ಹಾಗೂ ಡೆಹ್ರಾಡೂನ್, ಪುಣೆ ಮತ್ತು ಸಿಯಾಚಿನ್‌ನಲ್ಲಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ – ಕಾನೂನು ಇದ್ದರೂ ವ್ಯಾಪಾರಿಗಳು ಪಾಲಿಸುತ್ತಿಲ್ಲ, ಅಧಿಕಾರಿಗಳು ಪ್ರಶ್ನಿಸುತ್ತಿಲ್ಲ, ಸಾಗರದಲ್ಲಿ ಆಕ್ರೋಶ

ಮಾಜಿ ಸೈನಿಕರಾದ ಸುಬೇದಾರ್ ದಿನೇಶ್ ಕೊಡಸೆ, ಸುಬೇದಾರ್ ಮಾಲತೇಶಪ್ಪ, ಪ್ರಮುಖರಾದ ಎಂ.ಬಿ ಲಕ್ಷ್ಮಣ್ ಗೌಡ, ಗಣೇಶ್ ಕಾಮತ್, ದೇವರಾಜ್ ಕೆರೆಹಳ್ಳಿ ಸೇರಿದಂತೆ ಹಲವರು ಇದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 3, 2024

Leave a Comment