ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 4 JANUARY 2024
SHIMOGA : ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪ್ರಯೋಗ ಮುಂದುವರೆದಿದೆ. ಬೈಕ್ ಮಾಲೀಕನೊಬ್ಬನಿಗೆ ಒಂದೂವರೆ ಮೀಟರ್ ಉದ್ದದ ಬಿಲ್ ನೀಡಿದ್ದ ಸಂಚಾರ ಠಾಣೆ ಪೊಲೀಸರು ಈಗ ಅದಕ್ಕಿಂತಲೂ ದೊಡ್ಡ ದಂಡದ ಬಿಲ್ ನೀಡಿದ್ದಾರೆ.

ಹಲವು ಸಂಚಾರ ನಿಯಮ ಉಲ್ಲಂಘಿಸಿದ್ದ ನಾಲ್ಕು ಬೈಕ್ ಮತ್ತು ಒಂದು ಆಟೋಗೆ ದೊಡ್ಡ ಬಿಲ್ ನೀಡಿದ್ದಾರೆ. 12 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಸ್ಕೂಟಿಗೆ 13,500 ರೂ., 13 ಬಾರಿ ಉಲ್ಲಂಘನೆಗೆ ಪ್ಯಾಷನ್ ಪ್ರೋ ಬೈಕ್ಗೆ 13 ಸಾವಿರ ರೂ. ದಂಡ, ಆಟೋಗೆ 9 ಸಾವಿರ ರೂ. ದಂಡ ವಿಧಿಸಲಾಗಿದೆ. 42 ಸಂಚಾರ ನಿಯಮ ಉಲ್ಲಂಘನೆಗಾಗಿ ಐದು ವಾಹನದಿಂದ ಒಟ್ಟು 46,500 ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ. ಶಿವಮೊಗ್ಗ ನಗರದಾದ್ಯಂತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಂತೆ ವಾಹನಗಳ ವಿರುದ್ಧ ಪ್ರಕರಣ ದಾಖಲಾಗುತ್ತಿವೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದೇ ಬೈಕ್ಗೆ ಒಂದೂವರೆ ಮೀಟರ್ಗಿಂತಲೂ ಹೆಚ್ಚು ಉದ್ದದ ದಂಡದ ಬಿಲ್, ಫೈನ್ ಮೊತ್ತ ಎಷ್ಟು?
ಪಿಎಸ್ಐ ತಿರುಮಲೇಶ್, ಎಎಸ್ಐ ಮೋಹನ್, ಎಎಸ್ಐ ಕೃಷ್ಣಪ್ಪ, ಸಿಬ್ಬಂದಿ ನಾಸೀರ್ ಅಹಮ್ಮದ್, ಸಂದೀಪ್, ಪ್ರಕಾಶ್, ಪ್ರಶಾಂತ್ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.
LATEST NEWS
- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

About The Editor
ನಿತಿನ್ ಆರ್.ಕೈದೊಟ್ಲು






