ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 JANUARY 2024
HOSANAGARA : ಮೂರು ವರ್ಷದ ಬಳಿಕ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ (ಕೆಎಫ್‌ಡಿ) ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಹೊಸನಗರ ತಾಲೂಕು ಬಪ್ಪನಮನೆ ಗ್ರಾಮದ ಅನನ್ಯಾ (18) ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಅನನ್ಯಾಳನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ. ಆಕೆ ಸಾವನ್ನಪ್ಪಿದ್ದಾಳೆ.
ಹತ್ತು ದಿನದಿಂದ ಜ್ವರ ಬಳಲುತ್ತಿದ್ದಳು
ಅನನ್ಯಾಳಿಗೆ ಹತ್ತು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೊಸನಗರದ ಆಸ್ಪತ್ರೆಗೆ ದಾಖಲಾಗಿದ್ದ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಎಫ್‌ಡಿಯ ಎರಡನೇ ಪರೀಕ್ಷೆಯಲ್ಲಿ ಆಕೆಗೆ ಪಾಸಿಟಿವ್ ಬಂದಿತ್ತು. ಹೆಚ್ಚುವರಿ ಚಿಕಿತ್ಸೆಗಾಗಿ ಜ.5ರಂದು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಬಿಗಡಾಯಿಸಿದ್ದು ಅನನ್ಯಾ ಕೊನೆಯುಸಿರೆಳೆದಿದ್ದಾಳೆ.
ಅನನ್ಯಾಳ ಅಕ್ಕನಿಗು ಜ್ವರ
ಅನನ್ಯಾಳ ಅಕ್ಕನಿಗೂ ಜ್ವರ ಕಾಣಿಸಿಕೊಂಡಿದೆ. ಪರೀಕ್ಷಿಸಿದಾಗ ಆಕೆಗೆ ಡೆಂಘೆ ಜ್ವರ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸದ್ಯ ಆಕೆಗೆ ಚಿಕಿತ್ಸೆ ಮುಂದುವರೆದಿದ್ದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿನ ನೋವಿನ ಜೊತೆ ಆತಂಕ
ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಪ್ಪನಮನೆಯ ಅನನ್ಯಾ ಕೆಎಫ್‌ಡಿಗೆ ಸಾವನ್ನಪ್ಪಿರುವುದು ಗ್ರಾಮದಲ್ಲಿ ನೋವನ್ನುಂಟು ಮಾಡಿದೆ. ಜೊತೆಗೆ ಆತಂಕಕ್ಕು ಕಾರಣವಾಗಿದೆ. ಹೊಸನಗರ ತಾಲೂಕು ನಗರ ಹೋಬಳಿಯ ಸಂಪೆಕಟ್ಟೆಯಲ್ಲಿ 2018ರಲ್ಲಿ ಉಣುಗು ಪತ್ತೆಯಾಗಿತ್ತು. ಇದರ ಹೊರತು ಕೆಎಫ್‌ಡಿಯ ಲಕ್ಷಣಗಳು ಕಾಣಿಸಿರಲಿಲ್ಲ. ಈಗ ಯುವತಿ ಸಾವನ್ನಪ್ಪಿರುವುದು ಸ್ಥಳೀಯರನ್ನು ಚಿಂತೆಗೀಡು ಮಾಡಿದೆ.
ಇದನ್ನೂ ಓದಿ – ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಂಸದ, ಉದ್ಘಾಟನೆ ಯಾವಾಗ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422