ಬ್ಯಾಡ್ಜ್‌ ಪರಿಚಯಿಸಲು ಮುಂದಾದ ವಾಟ್ಸಪ್‌, ಏನಿದು? ಉಪಯೋಗವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 10 JANUARY 2024
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

WHATSAPP NEWS : ಪ್ರಮುಖ ಸಂಸ್ಥೆಗಳು, ಉದ್ಯಮಗಳು, ಸೆಲಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ಯಾರು ಬೇಕಿದ್ದರು ಡೂಪ್ಲಿಕೇಟ್‌ ಮಾಡುವ ಸಾಧ್ಯತೆ ಇದೆ. ಹಾಗಾಗಿ ವಿವಿಧ ಸಾಮಾಜಿಕ ಜಾಲತಾಣ ಸಂಸ್ಥೆಗಳು ವೆರಿಫೈಡ್‌ ಬ್ಯಾಡ್ಜ್‌ಗಳನ್ನು, ಟಿಕ್‌ ಮಾರ್ಕ್‌ಗಳನ್ನು ನೀಡುತ್ತಿವೆ. ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಟಿಕ್‌ ಮಾರ್ಕ್‌ಗಳನ್ನು ಕಾಣಬಹುದು. ಇದೇ ರೀತಿಯ ಬ್ಯಾಡ್ಜ್‌ ಈಗ ವಾಟ್ಸಪ್‌ಗು ಬರುತ್ತಿದೆ.

ಈಚೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ವಾಟ್ಸಪ್‌ ಖಾತೆ ಎಂದು ನಂಬಿಸಿ ವಾಟ್ಸಪ್‌ನಲ್ಲಿ ಲಿಂಕ್‌ ಹರಿದಾಡಿತ್ತು. ಸಿಎಂ ಪಿಣರಾಯಿ ವಿಜಯನ್‌ ಅವರ ಅಧಿಕೃತ ಖಾತೆ ಎಂದು ನಂಬಿಕೊಂಡು ಹಲವು ವಾಟ್ಸಪ್‌ ಗ್ರೂಪ್‌ ಸೇರಿದ್ದರು. ಇಂತಹ ಗೊಂದಲ ತಡೆಯಲು ವಾಟ್ಸಪ್‌ ಸಂಸ್ಥೆ ಬಿಸ್ನೆಸ್‌ಗಳಿಗೆ ಬ್ಯಾಡ್ಜ್‌ ನೀಡಲು ನಿರ್ಧರಿಸಿದೆ.

ಇದನ್ನೂ ಓದಿ – ಒಂದೇ ತಿಂಗಳು 71 ಲಕ್ಷ ವಾಟ್ಸಪ್‌ ಬ್ಯಾನ್‌, ನಿಮ್ಮ ವಾಟ್ಸಪ್‌ ಕಾಪಾಡಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ

ಫೇಸ್‌ಬುಕ್‌ನಲ್ಲಿ ಇರವ ಹಾಗೆ ಇನ್ಮುಂದೆ ವಾಟ್ಸಪ್‌ ಖಾತೆಗಳಿಗು ಬ್ಲೂ ಟಿಕ್‌ ಬರಲಿದೆ. ವಾಟ್ಸಪ್‌ ಡಿಪಿಯ ಕೆಳಗೆ ಬ್ಲೂ ಟಿಕ್‌ ಕಾಣಿಸಲಿದೆ. ವೆರಿಫೈಡ್‌ ಬಿಸ್ನೆಸ್‌ ಖಾತೆದಾರರಿಗೆ ಮಾತ್ರ ಈ ಟಿಕ್‌ ನೀಡಲಾಗುತ್ತಿದೆ. ಈ ಅಕೌಂಟ್‌ಗಳಿಗೆ ಹೆಚ್ಚುವರಿ ಫೀಚರ್‌ಗಳು ಲಭ್ಯವಾಗಲಿದೆ. ಇದಕ್ಕೆ ವಾಟ್ಸಪ್‌ ದರ ನಿಗದಿ ಮಾಡುವ ಸಂಭವವು ಇದೆ ಎಂದು ವರದಿಯಾಗಿದೆ.

Leave a Comment