ನ್ಯೂ ಮಂಡ್ಲಿ ಸರ್ಕಲ್‌ನಲ್ಲಿ ಹಾರನ್‌ ಮಾಡಿದ್ದಕ್ಕೆ ಚಾಲಕನ ಮೇಲೆ ಹಲ್ಲೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 12 JANUARY 2024

SHIMOGA : ನ್ಯೂ ಮಂಡ್ಲಿ ಸರ್ಕಲ್‌ನಲ್ಲಿ ವಾಹನದ ಹಾರನ್‌ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಗಾಯಗೊಂಡಿದ್ದ ಯುವಕ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

ನ್ಯೂ ಮಂಡ್ಲಿ ಸರ್ಕಲ್‌ನಲ್ಲಿ ಮುಂದೆ ನಿಂತಿದ್ದ ಕಾರಿಗೆ ಕ್ಯಾಟರಿಂಗ್‌ ಸಂಸ್ಥೆಯ ವಾಹನದ ಚಾಲಕ ಗಗನ್‌ ಹಾರನ್‌ ಮಾಡಿದ್ದ. ಆಗ ರಸ್ತೆ ಪಕ್ಕದಲ್ಲಿ ನಿಂತಿದ್ದ ನಾಲ್ವರು ಯುವಕರು ಚಾಲಕನ ಜೊತೆಗೆ ಜಗಳವಾಡಿದ್ದಾರೆ. ಹಾರನ್‌ ಯಾಕೆ ಮಾಡುತ್ತೀಯ ಎಂದು ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ಚಾಲಕ ಗಗನ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಗಗನ್‌ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾನೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂತು ಏರ್‌ ಆಂಬುಲೆನ್ಸ್‌ ವಿಮಾನ, ಮೆಟ್ರೋ ಆಸ್ಪತ್ರೆಯಿಂದ ಮಣಿಪಾಲಕ್ಕೆ ರೋಗಿ ಶಿಫ್ಟ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 12, 2024

Leave a Comment