ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 12 JANUARY 2024
SHIMOGA : ವೀಲಿಂಗ್ ಮಾಡುತ್ತ ಅಪಾಯಕಾರಿ ಸ್ಥಿತಿಯಲ್ಲಿ ಬೈಕ್ ಚಲಾಯಿಸಿದ ಮತ್ತೊಬ್ಬ ಯುವಕನಿಗೆ ಶಿವಮೊಗ್ಗ ನ್ಯಾಯಾಲಯ ದಂಡ ವಿಧಿಸಿದೆ. ತಾಲೂಕಿನ ಪುರದಾಳು ಸಮೀಪ ರಿಂಗ್ ರಸ್ತೆಯಲ್ಲಿ ಯುವಕನೊಬ್ಬ ಬೈಕ್ ವೀಲಿಂಗ್ ಮಾಡಿದ ವಿಡಿಯೋ ಪಶ್ಚಿಮ ಸಂಚಾರ ಪೊಲೀಸರಿಗೆ ಲಭ್ಯವಾಗಿತ್ತು.
ಪಶ್ಚಿಮ ಸಂಚಾರ ಠಾಣೆಯ ಹೆಚ್.ಸಿ. ಸಂದೀಪ್ ಬೈಕ್ ಮತ್ತು ಚಾಲಕನನ್ನು ಪತ್ತೆ ಹಚ್ಚಿದ್ದರು. ಪಿಎಸ್ಐ ತಿರುಮಲೇಶ್, ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್ ಚಾಲಕನಿಗೆ 11,500 ರೂ. ದಂಡ ವಿಧಿಸಿದೆ.
ನಿಯಮ ಉಲ್ಲಂಘಿಸಿದರೆ ದಂಡ ಫಿಕ್ಸ್
ಶಿವಮೊಗ್ಗ ನಗರದಲ್ಲಿ ಬೈಕ್ ವೀಲಿಂಗ್ ಮತ್ತು ಸ್ಟಂಟ್ ಮಾಡುವವರ ಸಂಖ್ಯೆ ಹೆಚ್ಚಿತ್ತು. ಸಂಚಾರ ಪೊಲೀಸರು ಇಂತಹವರನ್ನು ಪತ್ತೆ ಹಚ್ಚಿ, ದಂಡ ವಿಧಿಸುತ್ತಿದ್ದಾರೆ. ಹಾಗಾಗಿ ನಗರ ವ್ಯಾಪ್ತಿಯಲ್ಲಿ ವೀಲಿಂಗ್ ಹಾವಳಿ ತಗ್ಗಿದೆ. ಹೊರವಲಯದಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದರು. ಈಗ ರಿಂಗ್ ರಸ್ತೆಯಲ್ಲಿ ಸ್ಟಂಟ್ ಮಾಡಿದವರನ್ನು ಪತ್ತೆ ಹಚ್ಚಿ ಭಾರಿ ದಂಡ ಕಟ್ಟಿಸಿದ್ದಾರೆ. ನಗರದ ವಿವಿಧೆಡೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇನ್ನು, ಸಾರ್ವಜನಿಕರು ಕೂಡ ಸಂಚಾರ ಪೊಲೀಸರೊಂದಿಗೆ ವಿಡಿಯೋ, ಫೋಟೊ ಷೇರ್ ಮಾಡುತ್ತಿದ್ದಾರೆ. ಹಾಗಾಗಿ ನಿಯಮ ಉಲ್ಲಂಘಿಸಿದರೆ ದಂಡ ತೆತ್ತುವುದು ಅನಿವಾರ್ಯವಾಗುತ್ತದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೈಕ್ ವೀಲಿಂಗ್, ಯುವಕನಿಗೆ ಭಾರಿ ದಂಡ, ಪಕ್ಕದ ಬೈಕ್ನವನ ಮೇಲೂ ಬಿತ್ತು ಕೇಸ್
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






