ಕ್ರಿಕೆಟ್ ಪಂದ್ಯಾವಳಿ, ಮೊದಲ ಬಹುಮಾನ 50 ಸಾವಿರ ರೂ.
ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.jpg" alt="Cricket " width="926" height="521" />
SHIVAMOGGA LIVE NEWS | 14 JANUARY 2024
SHIMOGA : ಟೀಮ್ ಮಾಧ್ಯಮದಿಂದ ಜ.26 ರಿಂದ 28ರವರೆಗೆ ನಗರದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಕ್ರೀಡಾಂಗಣದಲ್ಲಿ ಅಂತರ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಮಾಧ್ಯಮ ಕಪ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಶಿ.ಜು.ಪಾಶ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ತಂಡಕ್ಕೆ 5 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಮೊದಲ ಬಹುಮಾನ 50 ಸಾವಿರ ರೂ. ನಗದು, ಎರಡನೇ ಬಹುಮಾನ 25 ಸಾವಿರ ರೂ., ಸಮಿ ಫೈನಲ್‌ನಲ್ಲಿ ಸೋತ ಎರಡು ತಂಡಗಳಿಗೆ ತಲಾ 7 ಸಾವಿರ ರೂ. ನಗದು ಬಹುಮಾನ, ಟ್ರೋಫಿ ನೀಡಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಟೀಮ್ ಮಾಧ್ಯಮದಲ್ಲಿ ಎಸ್.ಕೆ. ಗಜೇಂದ್ರ ಸ್ವಾಮಿ, ಜಿ.ಚಂದ್ರಶೇಖರ್, ಜಿ.ಪದ್ಮನಾಭ, ಸುಧೀರ್ ಇದ್ದರು.
ಮುಂದಿನ ಸುದ್ದಿ ಓದಲು ಕೆಳಗಿರುವ NEXT ಒತ್ತಿ