ಕೆರೆಯಲ್ಲಿ ರಾಶಿ ರಾಶಿ ಮೀನು ಮರಿಗಳು ಸಾವು

SHIVAMOGGA LIVE NEWS | 29 JANUARY 2024 (ಈ ಸುದ್ದಿಯನ್ನು ಇನ್ನು 30 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಮಲವಗೊಪ್ಪ ಕೆರೆಯಲ್ಲಿ ಮೀನು ಮರಿಗಳು ಸಾವನ್ನಪ್ಪಿವೆ. ಮೀನು ಸಾಕಣೆದಾರರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭಾನುವಾರ ಮೀನುಗಳು ಸಾವನ್ನಪ್ಪಿ ಕೆರೆ ದಂಡೆಗೆ ತೇಲಿ ಬರುತ್ತಿರುವುದನ್ನು ಸಾಕಣೆದಾರರು ಗಮನಿಸಿದ್ದಾರೆ.

ರಾಶಿ ರಾಶಿ ಮೀನುಗಳು ಸಾವನ್ನಪ್ಪಿರುವುದು ಸಾಕಣೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ‘8 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿ ಮೀನು ಸಾಕಣೆ ಮಾಡಿದ್ದೇವೆ. ಇದಕ್ಕಾಗಿ ಕೆರೆಯನ್ನು ಸ್ವಚ್ಛಗೊಳಿಸಿದ್ದೆವು. ಈಗ ಮೀನುಗಳು ಸಾವನ್ನಪ್ಪಿರುವುದರಿಂದ ಭಾರಿ ನಷ್ಟವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಳ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಉದ್ಯಮಿ ರುದ್ರೇಗೌಡರ ಯಶಸ್ಸಿನ ಸೀಕ್ರೆಟ್‌ ತಿಳಿಸಿದ ಮಾಜಿ ಸಿಎಂ ಯಡಿಯೂರಪ್ಪ, ಏನದು?

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Malavagoppa-Lake-Fishes

Leave a Comment