SHIVAMOGGA LIVE NEWS | 2 FEBRUARY 2024
SHIMOGA : ಕೇಂದ್ರ ಸರ್ಕಾರದ್ದು ಕಾಟಾಚಾರದ, ನಿರಾಶಾದಾಯಕ ಬಜೆಟ್. ಇದರಿಂದ ಸಾರ್ವಜನಿಕರಿಗೆ ಯಾವುದೆ ಪ್ರಯೋಜನೆ ಆಗಿಲ್ಲ. ಕೆಲವು ಉದ್ಯಮಿಗಳಿಗೆ ಗುತ್ತಿಗೆ ನೀಡಲು ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ ಎಂದು ಶಿವಮೊಗ್ಗ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಸುಂದರೇಶ್, ಕೇಂದ್ರ ಸರ್ಕಾರದ ಈತನಕದ ಬಜೆಟ್‌ನಿಂದ ಜಿಲ್ಲೆಯ ಕೈಗಾರಿಕೆಗಳಿಗೆ ಅನುಕೂಲ ಆಗಿಲ್ಲ. ವಸತಿ ಯೋಜನೆಗಳಾಗಿಲ್ಲ, ಗ್ರಾಮೀಣ ರಸ್ತೆಗಳು ನಿರ್ಮಾಣವಾಗಿಲ್ಲ ಎಂದು ಟೀಕಿಸಿದರು.
ಮಹಿಳೆಯರು, ಯುವಕರಿಗೆ ಒತ್ತು ನೀಡಲಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಯಾವುದೆ ಯೋಜನೆ ಪ್ರಕಟಿಸದೆ, ಅನುದಾನ ಮೀಸಲಿಡದೆ ಕೇವಲ ಹೇಳಿಕೆಗೆ ಸೀಮಿತವಾಗಿದೆ. ಯುವಕರಿಗೆ ನಿರುದ್ಯೋಗ ಸಮಸ್ಯೆ ಇದೆ. ಮಹಿಳೆಯರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇದ್ಯಾವುದಕ್ಕೂ ಬಜೆಟ್‌ನಲ್ಲಿ ಪರಿಹಾರ ಇಲ್ಲ.
ಅಂಬಾನಿ, ಅದಾನಿಗಷ್ಟೇ ಲಾಭ
ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಆದರೆ ಪ್ರವಾಸೋದ್ಯಮ ಕ್ಷೇತ್ರದ ಯೋಜನೆಗಳ ಗುತ್ತಿಗೆಯನ್ನು ಅಂಬಾನಿ, ಅದಾನಿಗೆ ನೀಡಲು ಸಂಚು ಇದು. ಈಗಾಗಲೆ ಹಲವು ವಿಮಾನ ನಿಲ್ದಾಣಗಳ ನಿರ್ವಹಣೆ ಗುತ್ತಿಗೆಯನ್ನು ಉದ್ಯಮಿಗಳಿಗೆ ನೀಡಲಾಗಿದೆ ಎಂದು ಸುಂದರೇಶ್ ಟೀಕಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಚಕಾರವಿಲ್ಲ
ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಘೋಷಿಸಿದ್ದರು. ಆದರೆ ಈತನಕ ಒಂದು ರುಪಾಯಿಯನ್ನೂ ಕೊಟ್ಟಿಲ್ಲ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಅದರ ಚಕಾರವೆತ್ತಿಲ್ಲ ಎಂದು ಆರೋಪಿಸಿದರು
ಬಜೆಟ್‌ನಲ್ಲಿ ಬಡವರ ಪರ ಯೋವುದೆ ಯೋಜನೆ ಘೋಷಿಸಿಲ್ಲ. ಆದರೆ ದೇಶದ ಸಾಲ ಹೆಚ್ಚುತ್ತಿದೆ. 11.90 ಲಕ್ಷ ಕೋಟಿ ರೂ. ಬಡ್ಡಿ ಕಟ್ಟಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ – ಸಿದ್ದರಾಮಯ್ಯಗೆ ನೊಬೆಲ್ ಪ್ರಶಸ್ತಿ ನೀಡಬೇಕು, ಶಿವಮೊಗ್ಗದಲ್ಲಿ ಈಶ್ವರಪ್ಪ ಲೇವಡಿ, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200