ಶಿವಮೊಗ್ಗ : ರಾಜ್ಯ ಸರ್ಕಾರದ್ದು ಮುಸ್ಲಿಂ (Muslim) ಸಮುದಾಯದ ತುಷ್ಠೀಕರಣದ ಬಜೆಟ್ ಎಂದು ಬಿಜೆಪಿ ಆರೋಪಿಸಿದೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಮಿನಿಸ್ಟರ್ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್
ಗ್ಯಾರಂಟಿ ಯೋಜನೆಗಾಗಿ ಪ್ರತಿ ಶಾಸಕರ ಕ್ಷೇತ್ರಕ್ಕೆ ತಲಾ 230 ಕೋಟಿ ರೂ. ಹಣ ಸಂದಾಯವಾಗುತ್ತದೆ. ಯಾವುದೇ ಕಮಿಷನ್ ಇಲ್ಲೆ ಹಣ ಫಲಾನುಭವಿಗಳಿಗೆ ತಲುಪಿಸಿ, ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಬಡವರ ಕೈಗೆ ಹಣ ಕೊಟ್ಟರೆ ಮಾರುಕಟ್ಟೆಯಲ್ಲಿ ಹಣದ ಚಲನೆ ಇರುತ್ತದೆ. ಆದರೆ ಬಡತನವನ್ನು ಜಾತಿ, ಧರ್ಮದ ಕಣ್ಣಿನಿಂದ ನೋಡುವುದು ಸರಿಯಲ್ಲ.
ಸಂಪೂರ್ಣ ಬಜೆಟ್ ಮುಸ್ಲಿಮ್ (Muslim) ಸಮುದಾಯಕ್ಕೆ ಕೊಡಲಾಗಿದೆಯೇ? ಉತ್ತರ ಪ್ರದೇಶದಲ್ಲಿ ಮುಸ್ಲಿಮರೆ ಇಲ್ಲವೆ. ಅಲ್ಲಿ ಸರ್ಕಾರ ಮುಸ್ಲಿಮರಿಗೆ ಸಹಾಯ ಮಾಡುತ್ತಿಲ್ಲವೆ. ನಾವು ಹೃದಯದಲ್ಲಿ ಗೋಮಾತೆಯನ್ನು ಇರಿಸಿಕೊಂಡಿದ್ದೇವೆ. ನಿತ್ಯ ಪೂಜೆ ಮಾಡುತ್ತೇವೆ. ಅವರಂತೆ ಬಾಯಿ ಮಾತಿಗೆ ಗೋಮಾತೆ ಅನ್ನುತ್ತಿಲ್ಲ. ದೇಶದಿಂದ ಭಾರಿ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದೆ. ಇದಕ್ಕೆ ಉತ್ತರವಿಲ್ಲ ಯಾಕೆ?

ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತದೆ. ಆದರೆ ಆ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಇತರೆ ಧರ್ಮಿಯರು ಇರುತ್ತಾರೆ. ಆ ಅನುದಾನ ಶೈಕ್ಷಣಿಕವಾಗಿ ಎಲ್ಲರಿಗು ನೆರವಾಗಲಿದೆ. ಇನ್ನು, ಶೈಕ್ಷಣಿಕ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರೂ. ಪೈಕಿ 1250 ಕೋಟಿ ರೂ. ಹಣವನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಆ ಭಾಗದಲ್ಲಿ ಎಲ್ಲ ಜಾತಿ, ಧರ್ಮಿಯರಿಗು ಇದರ ಅನುಕೂಲ ಸಿಗಲಿದೆ.
ಇದನ್ನೂ ಓದಿ » ರಾಜ್ಯ ಬಜೆಟ್, ಶಿವಮೊಗ್ಗಕ್ಕೆ ಸಿಕ್ಕಿದ್ದೇನು? ಪಟ್ಟಿ ಪ್ರಕಟಿಸಿದ ಮಿನಿಸ್ಟರ್ ಮಧು ಬಂಗಾರಪ್ಪ
ಬಿಜೆಪಿಯವರಿಗೆ ಪ್ರಗತಿಪರ ಯೋಚನೆ ಇಲ್ಲ. ಪಾಕಿಸ್ತಾನ, ಹಲಾಲ್ ಎಂದಷ್ಟೆ ಮಾತನಾಡುತ್ತಾರೆ. ಬಿಜೆಪಿ ಈ ದೇಶದಕ್ಕೆ ಅತಿದೊಡ್ಡ ಶಾಪ. ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 53 ಲಕ್ಷ ಕೋಟಿ ರೂ. ಸಾಲವಿತ್ತು. ಈಗ ಕೇಂದ್ರ ಸರ್ಕಾರದ ಸಾಲ 183 ಲಕ್ಷ ಕೋಟಿ ರೂ.ಗೆ ತಲುಪಿದೆ. ರಾಜ್ಯ ಸರ್ಕಾರ ಶೇ.3ರಷ್ಟು ಸಾಲ ಮಾಡಲು ಮಿತಿ ಇದೆ. ಆದರೆ ಕೇಂದ್ರ ಸರ್ಕಾರ ಈ ಮಿತಿಯನ್ನು ಮೀರಿ ಸಾಲ ಮಾಡಿದೆಯಲ್ಲ.
ಇದನ್ನೂ ಓದಿ » ಚಂದ್ರಗುತ್ತಿಯಲ್ಲಿ ವೈಭವದ ಬ್ರಹ್ಮರಥೋತ್ಸವ, ಲಕ್ಷ ಲಕ್ಷ ಭಕ್ತರು ಭಾಗಿ, ಏನೆಲ್ಲ ಧಾರ್ಮಿಕ ಕಾರ್ಯಕ್ರಮ ನಡೆಯಿತು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200