ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
KSRTC : ಪಾಯಿಂಟ್ ಟೂ ಪಾಯಿಂಟ್ ಎಕ್ಸ್ಪ್ರೆಸ್ ಸರ್ವಿಸ್ ಒದಗಿಸಲು ಕೆಎಸ್ಆರ್ಟಿಸಿ ಸಂಸ್ಥೆಯು ಅಶ್ವಮೇಧ ಬ್ರಾಂಡ್ನ 100 ಬಸ್ಸುಗಳನ್ನು ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಂಡಿದೆ. ಫೆ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಶ್ವಮೇಧಕ್ಕೆ ಚಾಲನೆ ನೀಡಲಿದ್ದಾರೆ.
ಪಾಯಿಂಟ್ ಟೂ ಪಾಯಿಂಟ್ ಎಕ್ಸ್ಪ್ರೆಸ್
ಅಶ್ವಮೇಧ ಬಸ್ಸುಗಳು ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ನೇರ ಸಂಪರ್ಕ ಕಲ್ಪಿಸಲಿವೆ. ಒಂದು ವರ್ಷದಿಂದ ಅಶ್ವಮೇಧ ಬಸ್ಸಿನ ಟ್ರಯಲ್ ರನ್ ನಡೆಸಲಾಗಿತ್ತು. ಇದು ಯಶಸ್ವಿಯಾದ ಹಿನ್ನೆಲೆ 100 ಬಸ್ಸುಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ.
ಅಶ್ವಮೇಧ ವಿಶೇಷತೆ ಏನು?
ಸಾಮಾನ್ಯ ಬಸ್ಸುಗಳು 3.189 ಮೀಟರ್ ಎತ್ತರ ಹೊಂದಿದ್ದರೆ, ಅಶ್ವಮೇಧ ಬಸ್ಸುಗಳು 3.42 ಮೀಟರ್ ಎತ್ತ ಹೊಂದಿವೆ. 52 ಬಕೆಟ್ ಟೈಪ್ ಸೀಟ್ಗಳನ್ನ ಹೊಂದಿವೆ. ಇದರಲ್ಲಿ ಪ್ರಯಾಣಿಕರು ಆರಾಮಾಗಿ ಕುಳಿತು ಪ್ರಯಾಣಿಸಬಹುದಾಗಿದೆ. ಬಸ್ಸಿನ ಮುಂದೆ ಮತ್ತು ಹಿಂದಿನ ಗಾಜುಗಳು ವಿಶಾಲವಾಗಿವೆ. ಕಿಟಕಿ ಫ್ರೇಮ್ಗಳು ಮತ್ತು ಮೇಲಿನ ಗಾಜುಗಳು ದೊಡ್ಡದಾಗಿವೆ. ಟಿಂಟೆಡ್ ಗಾಜುಗಳನ್ನು ಹೊಂದಿವೆ. ಹೊರಭಾಗದಲ್ಲಿ ಅಶ್ವಮೇಧ ಕುದುರೆ ಸ್ಟಿಕ್ಕರ್, ಅಶ್ವಮೇಧದ ಟೈಟಲ್ ಇದೆ.

ಇದನ್ನೂ ಓದಿ – KSRTC ಬಸ್ನಲ್ಲಿ ಪತಿಗೆ ಬಿ.ಪಿ ಮಾತ್ರೆ ಕೊಡಲು ವ್ಯಾನಿಟಿ ಬ್ಯಾಗ್ಗೆ ಕೈ ಹಾಕಿದ ಮಹಿಳೆಗೆ ಕಾದಿತ್ತು ಆಘಾತ
LATEST NEWS
- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

About The Editor
ನಿತಿನ್ ಆರ್.ಕೈದೊಟ್ಲು





